June 11, 2026
Thursday, June 11, 2026
spot_img

SNACKS | ಓವನ್ ಬೇಡವೇ ಬೇಡ! ಚಪಾತಿ ತವಾ ಬಳಸಿ ಕೇವಲ 5 ನಿಮಿಷದಲ್ಲಿ ಮಾಡಿ ಕೆಫೆ ಸ್ಟೈಲ್ ಗಾರ್ಲಿಕ್ ಬ್ರೆಡ್

ಸಂಜೆಯ ಚಹಾ ಅಥವಾ ಕಾಫಿ ಜೊತೆ ತಿನ್ನಲು ಏನಾದರೂ ಗರಿಗರಿಯಾದ ಮತ್ತು ರುಚಿಕರವಾದ ತಿಂಡಿ ಬೇಕೆನಿಸಿದಾಗ ತಕ್ಷಣ ನೆನಪಿಗೆ ಬರುವುದು ಬೇಕರಿ ಅಥವಾ ಕೆಫೆ ಸ್ಟೈಲ್ ಗಾರ್ಲಿಕ್ ಬ್ರೆಡ್. ಇದನ್ನು ಮನೆಯಲ್ಲಿಯೇ ಕೇವಲ 5 ನಿಮಿಷಗಳಲ್ಲಿ ಅತ್ಯಂತ ಕ್ರಿಸ್ಪಿಯಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಸ್ಲೈಸ್
ಬೆಣ್ಣೆ
ಬೆಳ್ಳುಳ್ಳಿ
ಕೊತ್ತಂಬರಿ ಸೊಪ್ಪು ಅಥವಾ ಚಿಲ್ಲಿ ಫ್ಲೇಕ್ಸ್

ಮಾಡುವ ವಿಧಾನ:
ಒಂದು ಸಣ್ಣ ಬೌಲ್‌ನಲ್ಲಿ ಮೃದುವಾದ ಬೆಣ್ಣೆ ಮತ್ತು ತುರಿದ ಬೆಳ್ಳುಳ್ಳಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. ನಂತರ ಈ ಬೆಳ್ಳುಳ್ಳಿ-ಬೆಣ್ಣೆಯ ಮಿಶ್ರಣವನ್ನು ಬ್ರೆಡ್ ಸ್ಲೈಸ್‌ಗಳ ಒಂದು ಬದಿಗೆ ಸಮನಾಗಿ ಸವರಿಕೊಂಡು. ತವಾವನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಬೆಣ್ಣೆ ಹಚ್ಚಿದ ಬ್ರೆಡ್‌ನ ಭಾಗವು ತವಾಕ್ಕೆ ತಗಲುವಂತೆ ಇಡಬೇಕು. ಬ್ರೆಡ್‌ನ ಕೆಳಭಾಗ ಬೇಯುತ್ತಿರುವಾಗಲೇ, ಅದರ ಮೇಲ್ಭಾಗಕ್ಕೂ ಸ್ವಲ್ಪ ಗಾರ್ಲಿಕ್ ಬಟರ್ ಅನ್ನು ಸವರಿ, 1-2 ನಿಮಿಷಗಳ ನಂತರ ಬ್ರೆಡ್‌ನ ಕೆಳಭಾಗ ಹೊಂಬಣ್ಣಕ್ಕೆ ತಿರುಗಿದಾಗ, ಅದನ್ನು ಮಗುಚಿ ಹಾಕಿ. ಇನ್ನೊಂದು ಬದಿಯೂ ಗರಿಗರಿಯಾಗುವವರೆಗೆ ಬೇಯಿಸಿದರೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ತವಾ ಗಾರ್ಲಿಕ್ ಬ್ರೆಡ್ ಸವಿಯಲು ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !