August 10, 2026
Monday, August 10, 2026
spot_img

SNACKS| ಸಂಜೆ ಟೀ ಜತೆ ತಿನ್ನಲು ಪರ್ಫೆಕ್ಟ್ ಸ್ನ್ಯಾಕ್ಸ್ : ಗರಿಗರಿ ಕ್ಯಾಬೇಜ್ ವಡೆ ರೆಸಿಪಿ ಇಲ್ಲಿದೆ!

ದಿನಾ ಒಂದೇ ತರಹದ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಈ ಬಾರಿ ಸಂಜೆಯ ಚಹಾ ಸಮಯಕ್ಕೆ ಗರಿಗರಿಯಾದ ಎಲೆಕೋಸು ವಡೆಯನ್ನು ಟ್ರೈ ಮಾಡಿ. ಸಾಮಾನ್ಯವಾಗಿ ಮಕ್ಕಳು ಎಲೆಕೋಸು ಪಲ್ಯ ಅಥವಾ ಸಾಂಬಾರ್ ಎಂದರೆ ತಿನ್ನಲು ಹಠ ಮಾಡುತ್ತಾರೆ. ಆದರೆ ಈ ರೀತಿ ಮಸಾಲೆ ಮತ್ತು ಈರುಳ್ಳಿ ಸೇರಿಸಿ ಗರಿಗರಿಯಾದ ವಡೆ ಮಾಡಿಕೊಟ್ಟರೆ ಪ್ಲೇಟ್ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ.

ಬೇಕಾಗುವ ಸಾಮಗ್ರಿಗಳು

ಎಲೆಕೋಸು

ಕಡ್ಲೆಹಿಟ್ಟು

ಅಕ್ಕಿ ಹಿಟ್ಟು

ಈರುಳ್ಳಿ  

ಹಸಿಮೆಣಸಿನಕಾಯಿ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು

ಜೀರಿಗೆ

ಅಚ್ಚಖಾರದ ಪುಡಿ ಮತ್ತು ಅರಿಶಿನ

ಉಪ್ಪು

ಎಣ್ಣೆ

ಮಾಡುವ ವಿಧಾನ

ಒಂದು ದೊಡ್ಡ ಪಾತ್ರೆಗೆ ಹೆಚ್ಚಿದ ಎಲೆಕೋಸು, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ಜೀರಿಗೆ, ಅಚ್ಚಖಾರದ ಪುಡಿ, ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಯಿಂದ ಚೆನ್ನಾಗಿ ಹಿಸುಕಿ ಕಲಸಿ. ಈಗ ಅದಕ್ಕೆ ಕಡ್ಲೆಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಹಾಕಿ ಗಟ್ಟಿಯಾಗಿ ಕಲಸಿ. ಮಿಶ್ರಣವು ವಡೆ ತಟ್ಟುವ ಹದಕ್ಕೆ ಬರಬೇಕು. ಎಣ್ಣೆಯನ್ನು ಕಾಯಿಸಲು ಇಟ್ಟು, ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಸಣ್ಣ ನಿಂಬೆಹಣ್ಣಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ವಡೆಯ ಆಕಾರಕ್ಕೆ ತಟ್ಟಿ. ಕಾದ ಎಣ್ಣೆಯಲ್ಲಿ ವಡೆಗಳನ್ನು ಹಾಕಿ, ಉರಿಯನ್ನು ಮಧ್ಯಮ ಹದದಲ್ಲಿಟ್ಟು ಎರಡು ಕಡೆ ಚಿನ್ನದ ಬಣ್ಣ ಬರುವವರೆಗೆ ಗರಿಗರಿಯಾಗಿ ಕರಿದರೆ, ಕ್ರಿಸ್ಪಿ ಎಲೆಕೋಸು ವಡೆ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !