ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿರುವ Potato Button Noodles ಮನೆಯಲ್ಲೇ ತುಂಬಾ ಸಿಂಪಲ್ ಆಗಿ ಮಾಡಬಹುದು. ಸಂಜೆ ಟೀ ಟೈಮ್‌ಗೆ ಬೆಸ್ಟ್ ನೂಡಲ್ಸ್ ಇದು!
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ – 3 ದೊಡ್ಡವು
ಅಕ್ಕಿ ಹಿಟ್ಟು – ½ ಕಪ್
ಕಾರ್ನ್ ಫ್ಲೋರ್ – 2 ಟೇಬಲ್ ಸ್ಪೂನ್
ಮೆಣಸಿನ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ
ಎಣ್ಣೆ – ಕರಿಯಲು
ಸಾಸಿವೆ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಸಾಸ್‌ಗಳು
ಮಾಡುವ ವಿಧಾನ:
3 ಆಲೂಗಡ್ಡೆಗಳನ್ನು ಬೇಯಿಸಿ ಸ್ಮೂತ್ ಆಗಿ ಮ್ಯಾಶ್ ಮಾಡಿ. ಮ್ಯಾಶ್ ಮಾಡಿದ ಆಲೂಗಡ್ಡೆಗೆ ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಉಪ್ಪು, ಮೆಣಸಿನ ಪುಡಿ ಸೇರಿಸಿ ಸಾಫ್ಟ್ ಡೋ ಮಾಡಿಕೊಳ್ಳಿ.
ಡೋ ಅನ್ನು ಸಣ್ಣ ಉಂಡೆಗಳಾಗಿ ಮಾಡಿ, ಚಿತ್ರದಲ್ಲಿರುವಂತೆ ಆಕಾರ ನೀಡಿ ಬಿಸಿ ನೀರಿನಲ್ಲಿ ಹಾಕಿ. 2–3 ನಿಮಿಷಗಳಲ್ಲಿ ಮೇಲಕ್ಕೆ ತೇಲಿ ಬಂದರೆ ಬೆಂದಿದೆ ಎಂದು ಅರ್ಥ. ಬೇಯಿಸಿದ ಉಂಡೆಗಳನ್ನು ತೆಗೆದು ಇಟ್ಟುಕೊಳ್ಳಿ.
ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಬೆಳ್ಳುಳ್ಳಿ, ಕ್ಯಾಪ್ಸಿಕಂ ತೂಗುಸಿ, ಸೋಯಾ ಸಾಸ್, ಚಿಲ್ಲಿ ಸಾಸ್ ಸೇರಿಸಿ ಫ್ರೈ ಮಾಡಿದ ನೂಡಲ್ಸ್ ಹಾಕಿ toss ಮಾಡಿದ್ರೆ ಆಯಿತು.

