July 28, 2026
Tuesday, July 28, 2026
spot_img

SNACKS| ವೇಟ್ ಲಾಸ್ ಜರ್ನಿಗೆ ಬೆಸ್ಟ್ ಪಾರ್ಟ್ನರ್: ಎಣ್ಣೆಯಿಲ್ಲದೆ ಹಬೆಯಲ್ಲಿ ಬೇಯಿಸಿದ ವೆಜ್ ಮೊಮೋಸ್ ಇಲ್ಲಿದೆ

ಈ ಮಳೆಗಾಲದ ಸಂಜೆಯ ಸಮಯದಲ್ಲಿ ಕಣ್ಣಿಗೆ ಕಾಣುವ ಜಂಕ್ ಫುಡ್ ತಿಂದು ಡಯಟ್ ಹಾಳು ಮಾಡಿಕೊಳ್ಳುವ ಬದಲು, ಮನೆಯಲೇ ಸೂಪರ್ ಹೆಲ್ತಿ ಸ್ನಾಕ್ಸ್ ಮಾಡಬಹುದು.ಹೊರಗಿನ ಮೈದಾ ಮತ್ತು ಎಣ್ಣೆಯುಕ್ತ ಮೊಮೋಸ್‌ಗಳಿಗೆ ಬೈ-ಬೈ ಹೇಳಿ, ಗೋಧಿ ಹಿಟ್ಟು ಮತ್ತು ಫ್ರೆಶ್ ತರಕಾರಿಗಳಿಂದ ಮಾಡುವ ಈ ವೆಜ್ ಸ್ಟೀಮ್ಡ್ ಮೊಮೋಸ್ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು

 ಉಪ್ಪು

ನೀರು

ಎಣ್ಣೆ

ಎಲೆಕೋಸು

ಕ್ಯಾರೆಟ್

ಕ್ಯಾಪ್ಸಿಕಂ

ಈರುಳ್ಳಿ

ಬೆಳ್ಳುಳ್ಳಿ ಮತ್ತು ಶುಂಠಿ

ಕಾಳುಮೆಣಸಿನ ಪುಡಿ

ಸೋಯಾ ಸಾಸ್

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ.  ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ 1 ಟೀಚಮಚ ಎಣ್ಣೆ ಸವರಿ, ಒದ್ದೆ ಬಟ್ಟೆ ಮುಚ್ಚಿ 20 ನಿಮಿಷ ನೆನೆಯಲು ಬಿಡಬೇಕು. ಬಳಿಕ ಬಾಣಲೆಯಲ್ಲಿ 1 ಟೀಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದು, ನಂತರ ಈರುಳ್ಳಿ ಹಾಕಿ 1 ನಿಮಿಷ ಬಾಡಿಸಿ. ನಂತರ ತುರಿದ ಎಲೆಕೋಸು, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ತರಕಾರಿಗಳ ತೇವಾಂಶ ಹೋಗುವವರೆಗೆ ಮಧ್ಯಮ ಉರಿಯಲ್ಲಿ 3-4 ನಿಮಿಷ ಹುರಿಯಬೇಕು. ನಂತರ ಕೊನೆಯದಾಗಿ ಕಾಳುಮೆಣಸಿನ ಪುಡಿ, ಸೋಯಾ ಸಾಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ, ತಣ್ಣಗಾಗಲು ಬಿಡಬೇಕು.

ನಂತರ ಕಲಸಿದ ಹಿಟ್ಟಿನಿಂದ ಸಣ್ಣ ಸಣ್ಣ ನಿಂಬೆಹಣ್ಣು ಗಾತ್ರದ ಉಂಡೆಗಳನ್ನು ಮಾಡಿಕೊಂಡು. ಸಣ್ಣ ಪೂರಿಯ ಆಕಾರದಲ್ಲಿ ಲಟ್ಟಿಸಿಕೊಂಡು ಪೂರಿಯ ಮಧ್ಯದಲ್ಲಿ 1 ಚಮಚ ತರಕಾರಿ ಮಿಶ್ರಣವನ್ನು ಹಾಕಿ ಈಗ ಅಂಚುಗಳನ್ನು ಒಂದರ ಮೇಲೊಂದು ಮಡಚುತ್ತಾ ನಿಮಗೆ ಇಷ್ಟವಾದ ಆಕಾರದಲ್ಲಿ ಮೊಮೋಸ್ ಅನ್ನು ಮಾಡಿ, ಇಡ್ಲಿ ಪಾತ್ರೆ ಅಥವಾ ಸ್ಟೀಮರ್ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ಅದರಲ್ಲಿ ಮೊಮೋಸ್‌ಗಳನ್ನು ಇಟ್ಟು. ನೀರು ಕುದಿಯುತ್ತಿರುವ ಸ್ಟೀಮರ್‌ನಲ್ಲಿ ಈ ತಟ್ಟೆಯನ್ನಿಟ್ಟು, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 10 ರಿಂದ 12 ನಿಮಿಷ ಹಬೆಯಲ್ಲಿ ಬೇಯಿಸಿ. ಗೋಧಿ ಹಿಟ್ಟು ಕೈಗೆ ಅಂಟದಿದ್ದರೆ ಮೊಮೋಸ್ ಬೆಂದಿದೆ ಎಂದು ಅರ್ಥ. ಈಗ ಬಿಸಿಬಿಸಿಯಾದ ಹೆಲ್ತಿ ಗೋಧಿ ಹಿಟ್ಟಿನ ವೆಜ್ ಮೊಮೋಸ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !