May 31, 2026
Sunday, May 31, 2026
spot_img

Snacks | ರೆಸ್ಟೋರೆಂಟ್ ಶೈಲಿಯ ಗರಿಗರಿಯಾದ ಆಲೂ ಸ್ಟಿಕ್ಸ್ ಈಗ ನಿಮ್ಮ ಮನೆಯಲ್ಲೇ ಟ್ರೈ ಮಾಡಿ

ಆಲೂಗಡ್ಡೆ ಫಿಂಗರ್ಸ್ ಸಂಜೆಯ ಚಹಾ ಅಥವಾ ಕಾಫಿ ಜೊತೆ ಸವಿಯಲು ಒಂದು ಅತ್ಯುತ್ತಮ, ಗರಿಗರಿಯಾದ ಮತ್ತು ರುಚಿಕರವಾದ ಕುರುಕುಲು ತಿಂಡಿಯಾಗಿದೆ. ಹೊರಗಡೆ ಸಿಗುವ ಫ್ರೆಂಚ್ ಫ್ರೈಸ್ ಅಥವಾ ಆಲೂ ಸ್ಟಿಕ್ಸ್ ತರಹವೇ ಇರುವುದರಿಂದ ಮಕ್ಕಳು ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲೇ ಸದಾ ಲಭ್ಯವಿರುವ ಆಲೂಗಡ್ಡೆ ಮತ್ತು ರವೆಯನ್ನು ಬಳಸಿ ಕೇವಲ 15-20 ನಿಮಿಷಗಳಲ್ಲಿ ಇದನ್ನು ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಆಲೂಗಡ್ಡೆ
ರವೆ
ನೀರು
ಅಚ್ಚಖಾರದ ಪುಡಿ
ಜೀರಿಗೆ ಪುಡಿ ಅಥವಾ ಚಾಟ್ ಮಸಾಲಾ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ½ ಕಪ್ ನೀರು, ಸ್ವಲ್ಪ ಉಪ್ಪು ಮತ್ತು 1 ಚಮಚ ಎಣ್ಣೆ ಹಾಕಿ ಕುದಿಯಲು ಬಿಡಬೇಕು. ನೀರು ಕುದಿ ಬಂದಾಗ ½ ಕಪ್ ರವೆ ಹಾಕಿ ಗಂಟಿಲ್ಲದಂತೆ ತಕ್ಷಣ ಕೈಯಾಡಿಸಿ. ಒಲೆಯನ್ನು ಸಣ್ಣ ಉರಿಯಲ್ಲಿಟ್ಟು, ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ, ನಂತರ ಒಲೆ ಆಫ್ ಮಾಡಬೇಕು. ಬೆಂದ ರವೆ ಸ್ವಲ್ಪ ಆರಿದ ನಂತರ, ಅದಕ್ಕೆ ಬೇಯಿಸಿ ನುಣ್ಣಗೆ ಕಿವುಚಿದ ಆಲೂಗಡ್ಡೆ, ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ಎಲ್ಲವನ್ನೂ ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಹಿಟ್ಟಿನಿಂದ ಸಣ್ಣ ಉಂಡೆ ತೆಗೆದುಕೊಂಡು ಮಣೆ ಅಥವಾ ಚಾಪಿಂಗ್ ಬೋರ್ಡ್ ಮೇಲೆ ರೋಲ್ ಮಾಡಿ, ಉದ್ದನೆಯ ಕಡ್ಡಿಯ ಆಕಾರ ನೀಡಿ. ನಿಮಗೆ ಬೇಕಾದ ಉದ್ದಕ್ಕೆ ಚಾಕುವಿನಿಂದ ಕತ್ತರಿಸಿಕೊಳ್ಳಬೇಕು.ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ. ಎಣ್ಣೆ ಕಾದ ನಂತರ ಉರಿಯನ್ನು ಮಧ್ಯಮ ಹದಕ್ಕೆ ತಂದು, ಮಾಡಿಟ್ಟುಕೊಂಡ ಫಿಂಗರ್ಸ್ ಇಳಿಸಿ. ತಕ್ಷಣ ಕೈಯಾಡಿಸಬಾರದು, 1 ನಿಮಿಷದ ನಂತರ ತಿರುಗಿಸಿ ಹಾಕಿ, ಹೊಂಬಣ್ಣ ಬರುವವರೆಗೆ ಕರಿದು ಹೊರಗೆ ತೆಗೆದರೆ ಆಲೂಗಡ್ಡೆ ಫಿಂಗರ್ಸ್ ಸಿದ್ದವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !