ಶೂನಲ್ಲಿ ನಾಗಪ್ಪ, ಯುವತಿ ಕಂಡು ಬುಸ್..ಬುಸ್! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಳೆಗಾಲದಲ್ಲಿ ಹಾವು, ವಿಷಜಂತುಗಳ ಕಾಟ ಹೆಚ್ಚಾಗಿ ಕಂಡು ಬರುತ್ತದೆ. ಹೊರಗಡೆಯ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ. ಬೆಚ್ಚಗಿರಲು ಮನೆಯೊಳಕ್ಕೂ ಬರುತ್ತವೆ. ಇತ್ತೀಚೆಗಷ್ಟೇ ನಾಗರ ಹಾವೊಂದು ಶೂನಲ್ಲಿ ಸೇರಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ. ಸುಶಾಂತ ನಂದಾ ಎಂಬ ಐಎಫ್‌ಎಸ್ ಅಧಿಕಾರಿ ತಮ್ಮ ಟ್ವಿಟರ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶೂನಲ್ಲಿ ಹಾವು ಇರುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರು ನೀಡಿದ್ದಾರೆ.

ನಾಗರಹಾವು ರಕ್ಷಿಸಲು ಬಂದ ಯುವತಿ ಚಾಣಾಕ್ಷತನದಿಂದ ಶೂನಲ್ಲಿದ್ದ ನಾಗಪ್ಪನನ್ನು ಹೊರಗೆಳೆದಿದ್ದಾಳೆ. ಆಚೆ ಬಂದ ಕೂಡಲೇ ಬುಸ್‌ ಎಂದು ಯುವತಿಗೆ ಕಚ್ಚಲು ಹೋಗಿದೆ. ಜಾಣತನದಿಂದ ಪಾರಾದ ಯುವತಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!