ವಿಧಾನಸಭಾ ಚುನಾವಣೆ: ರಾಜ್ಯದಲ್ಲಿ ಇದುವರೆಗೂ ಶೇ.20.94ರಷ್ಟು ಮತದಾನ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಕರ್ನಾಟಕ ವಿಧಾನಸಭಾ ಮತದಾನ ಶುರುವಾಗಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಬ್ಬ ನಾಗರೀಕನೂ ಭಾಗಿಯಾಗಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ ಶೇಕಡಾ 20ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಅಯೋಗ ತಿಳಿಸಿದೆ.

ಬೆಳಗ್ಗೆ 11 ಗಂಟೆಯವರೆಗೆ ಶೇ.20.94ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆ ಸ್ವಲ್ಪ ಮಂದಗತಿಯಿಂದ ಶುರುವಾದ ಮತದಾನ ಬರುಬರುತ್ತಾ ಚುರುಕಾಗಿದೆ. ಕರ್ನಾಟಕದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಮತದಾನವು ಶೇಕಡಾ 20.94 ಕ್ಕೆ ಏರಿಕೆಯಾಗಿದೆ.

ಬೆಳಗ್ಗೆ ೧೧ಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.28.89, ಮೂಡುಬಿದಿರೆ-ಶೇ. 27.52, ಮಂಗಳೂರು ನಗರ ಉತ್ತರ-ಶೇ. 27.31, ಮಂಗಳೂರು ನಗರ ದಕ್ಷಿಣ-ಶೇ. 25.57, ಮಂಗಳೂರು-ಶೇ. 26,54 ಬಂಟ್ವಾಳ-ಶೇ.29.51, ಪುತ್ತೂರು-ಶೇ.29.79,  ಸುಳ್ಯ-ಶೇ. 30,52 ಮತದಾನವಾಗಿದೆ.

ಬೆಂಗಳೂರು ಸೆಂಟ್ರಲ್​ ಶೇಕಡಾ 19.30ರಷ್ಟು, ಬೆಂಗಳೂರು ಉತ್ತರ ಶೇಕಡಾ 17.50, ಬೆಂಗಳೂರು ದಕ್ಷಿಣ ಶೇಕಡಾ 19.18ರಷ್ಟು, ಬೆಂಗಳೂರು ನಗರದಲ್ಲಿ ಶೇಕಡಾ 17.72, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 23.44, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 20.23, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 20.76, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 23.56, ಬೀದರ್ ಜಿಲ್ಲೆಯಲ್ಲಿ ಶೇಕಡಾ 20.54, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 20.66, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 16.77, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 21.46, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 22.29 ಮತದಾನವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 18.56, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 28.46, ದಾವಣಗೆರೆ ಜಿಲ್ಲೆಯಲ್ಲಿ ಶೇಕಡಾ 21.32, ಧಾರವಾಡ ಜಿಲ್ಲೆಯಲ್ಲಿ ಶೇಕಡಾ 20.82, ಗದಗ ಜಿಲ್ಲೆಯಲ್ಲಿ ಶೇಕಡಾ 21.14, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 17.89, ಹಾಸನ ಜಿಲ್ಲೆಯಲ್ಲಿ ಶೇಕಡಾ 22.18, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 19.44, ಕೊಡಗು ಜಿಲ್ಲೆಯಲ್ಲಿ ಶೇಕಡಾ 26.49, ಕೋಲಾರ ಜಿಲ್ಲೆಯಲ್ಲಿ ಶೇಕಡಾ 19.87, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 21.46, ಮಂಡ್ಯ ಜಿಲ್ಲೆಯಲ್ಲಿ ಶೇಕಡಾ 19.56, ಮೈಸೂರು ಜಿಲ್ಲೆಯಲ್ಲಿ ಶೇಕಡಾ 19.34, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 22.48, ರಾಮನಗರ ಜಿಲ್ಲೆಯಲ್ಲಿ ಶೇಕಡಾ 25.21, ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 22.75, ತುಮಕೂರು ಜಿಲ್ಲೆಯಲ್ಲಿ ಶೇಕಡಾ 22.06, ಉಡುಪಿ ಜಿಲ್ಲೆಯಲ್ಲಿ ಶೇಕಡಾ 30.26, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 25.46, ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 21.07, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 18.84ರಷ್ಟು ಮತದಾನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!