August 19, 2026
Wednesday, August 19, 2026
spot_img

ಗಗನಕ್ಕೇರಿದ ಬೆಲೆ, ಪತಾಳಕ್ಕಿಳಿದ ಮಾರಾಟ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಲ್ಲಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಮಾರ್ಟ್‌ಫೋನ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಭಾರತದ ಮಾರುಕಟ್ಟೆಯಲ್ಲಿ ಹೊಸ ಫೋನ್‌ಗಳ ಪೂರೈಕೆ ಮಾತ್ರ ಕುಸಿತದ ಹಾದಿ ಹಿಡಿದಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಸಂಸ್ಥೆಯ 2026ರ ಮೊದಲ ತ್ರೈಮಾಸಿಕದ ವರದಿ ಅನ್ವಯ, ಕಳೆದ ಆರು ವರ್ಷಗಳಲ್ಲಿ ಕಂಡುಬರದಂತಹ ಹಿನ್ನಡೆ ಈ ಬಾರಿ ಉಂಟಾಗಿದೆ.

ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವುದು ಗ್ರಾಹಕರನ್ನು ಹೊಸ ಫೋನ್ ಖರೀದಿಯಿಂದ ದೂರ ಉಳಿಯುವಂತೆ ಮಾಡಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಪ್ರಮುಖ 80 ಮಾದರಿಗಳ ಬೆಲೆ ಶೇ. 15ರಷ್ಟು ಹೆಚ್ಚಾಗಿದ್ದು, ಮುಂದಿನ ಏಪ್ರಿಲ್-ಜೂನ್ ಅವಧಿಯಲ್ಲಿ ಇದು ಶೇ. 20ಕ್ಕೆ ತಲುಪುವ ಭೀತಿ ಇದೆ.

ಜನರ ಆದಾಯ ಮತ್ತು ಕೊಳ್ಳುವ ಶಕ್ತಿಯಲ್ಲಿನ ವ್ಯತ್ಯಯ ಹಾಗೂ ಮೊಬೈಲ್ ಬಿಡಿಭಾಗಗಳ ದರ ಏರಿಕೆಯು ಸ್ಮಾರ್ಟ್‌ಫೋನ್ ಕಂಪನಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ. 3ರಷ್ಟು ಪೂರೈಕೆ ಇಳಿಕೆಯಾಗಿರುವುದು ಉದ್ಯಮದ ಮೇಲೆ ಗಾಢ ಪರಿಣಾಮ ಬೀರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !