ಇಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಮಾಧ್ಯಮದಿಂದ ಎಷ್ಟು ಉಪಯೋಗ ಅಷ್ಟೇ ಅಪಾಯವೂ ಇದೆ. ಪ್ರಮುಖವಾಗಿ ಮಕ್ಕಳು ಹಾಳಾಗುತ್ತಿದ್ದಾರೆ, ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯ ವಿಚಾರದಲ್ಲೂ ಮಕ್ಕಳ ಮೇಲೆ ಸೋಶಿಯಲ್ ಮೀಡಿಯಾ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಹೀಗಾಗಿ ಫ್ಲೋರಿಡಾದಲ್ಲಿ 14 ವರ್ಷದೊಳಗಿನ ಅಪ್ರಾಪ್ತರನ್ನು ಎಲ್ಲಾ ಸೋಶಿಯಲ್ ಮೀಡಿಯಾ ಬಳಕೆಯಿಂದ ಬ್ಯಾನ್ ಮಾಡಲಾಗಿದೆ. ಜೊತೆಗೆ 14 ರಿಂದ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡಲು ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯ ಎಂಬ ಹೊಸ ನೀತಿ ಜಾರಿಗೊಳಿಸಿದೆ.

ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ, ಖಾತೆ ತೆರೆದು ಸಕ್ರಿಯವಾಗುವುದರಿಂದ ಆಗುವ ಸಾಧಕ ಬಾಧಕಗಳ ಕುರಿತು ತಜ್ಞರ ತಂಡ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಆಧರಿಸಿ ಕಾಯ್ದೆ ತಂದ ಫ್ಲೋರಿಡಾ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತ್ತು. ಬಳಿಕ ಕಾಯ್ದೆ ಜಾರಿಗೆ ಗವರ್ನರ್‌ಗೆ ಕಳುಹಿಸಲಾಗಿತ್ತು. ಇದೀಗ ಫ್ಲೋರಿಡಾ ಗವರ್ನರ್ ರಾನ್ ಡೆಸ್ಯಾಂಟಿಸ್ ಈ ಕಾಯ್ದೆಗೆ ಸಹಿ ಹಾಕಿದ್ದಾರೆ. ಇದೀಗ ಫ್ಲೋರಿಡಾದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ನೀತಿ ಜಾರಿಗೆ ಬಂದಿದೆ.

ನೂತನ ಕಾಯ್ದೆ ಪ್ರಕಾರ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಸಕ್ರಿಯವಾಗಿರುವ ಅಪ್ರಾಪ್ತರ ಖಾತೆಗಳನ್ನು ಡಿಲೀಟ್ ಮಾಡಬೇಕು. ಇನ್ನು 15 ವರ್ಷದ ಮಕ್ಕಳು ಪೋಷಕರ ಒಪ್ಪಿಗೆ ಪಡೆದು ಸಾಮಾಜಿಕ ಮಾಧ್ಯಮ ಖಾತೆ ಬಳಕೆ ಮಾಡಬಹುದು. 14 ರಿಂದ 16 ವರ್ಷದೊಳಗಿನ ಮಕ್ಕಳು ಪೋಷಕರ ಒಪ್ಪಿಗೆಯೊಂದಿಗೆ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸಬಹುದು ಅಥವಾ ಬಳಕೆ ಮಾಡಬಹುದು. ಆದರೆ ಪೋಷಕರಿಲ್ಲದ ಮಕ್ಕಳು ಥರ್ಡ್ ಪಾರ್ಟಿ ಅನುಮತಿ ಪಡೆಯುವ ಅಗತ್ಯವಿದೆ .

ಫ್ಲೋರಿಡಾದಲ್ಲಿ ಅಧಿಕಾರದಲ್ಲಿರುವ ಸ್ಟೇಟ್ ರಿಪಬ್ಲಿಕನ್ ಪಕ್ಷ ಈ ಹೊಸ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಈ ಕಾಯ್ದೆಯನ್ನು ಫೆಬ್ರವರಿಯಲ್ಲಿ ಮಂಡನೆ ಮಾಡಲಾಗಿತ್ತು. ಮೊದಲು ಮಂಡಿಸಿದ ಕಾಯ್ದೆಯಲ್ಲಿ 16 ವರ್ಷದೊಳಗಿನ ಎಲ್ಲಾ ಅಪ್ರಾಪ್ತರು ಸೋಶಿಯಲ್ ಮೀಡಿಯಾ ಬಳಕೆಯಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಕೆಲ ತಿದ್ದುಪಡಿ ತರಲಾಗಿತ್ತು. ಇದೀಗ ಈ ಕಾಯ್ದೆ ಜಾರಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!