ಕಾಂಗ್ರೆಸ್ ನ 7ನೇ ಪಟ್ಟಿ ರಿಲೀಸ್: ಐದು ಅಭ್ಯರ್ಥಿಗಳ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 7ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಛತ್ತೀಸ್ ಗಢದ ನಾಲ್ವರು ಮತ್ತು ತಮಿಳುನಾಡಿನ ಒಬ್ಬ ಅಭ್ಯರ್ಥಿಯ ಹೆಸರನ್ನು ಘೋಷಿಸಿದೆ.

ತಮಿಳುನಾಡಿನ ಮೈಲಾಡುತುರೈನಿಂದ ಕಾಂಗ್ರೆಸ್ ಆರ್ ಸುಧಾ ಅವರನ್ನು ಕಣಕ್ಕಿಳಿಸಿದೆ.

ಛತ್ತೀಸ್ ಗಢದ ಸುರ್ಗುಜಾ ಕ್ಷೇತ್ರದಿಂದ ಶಶಿ ಸಿಂಗ್, ರಾಯ್ ಗಢದಿಂದ ಮೇನಕಾ ದೇವಿ ಸಿಂಗ್, ಬಿಲಾಸ್ಪುರದಿಂದ ದೇವೇಂದ್ರ ಸಿಂಗ್ ಯಾದವ್ ಮತ್ತು ಕಂಕೇರ್ ನಿಂದ ಬೀರೇಶ್ ಠಾಕೂರ್ ಅವರನ್ನ ಪಕ್ಷ ಕಣಕ್ಕಿಳಿಸಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!