Friday, October 7, 2022

Latest Posts

ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಯೋಧರಿಗೆ ಸಿಕ್ಕಿತು ಗ್ರೇಟ್ ಸೆಲ್ಯೂಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಎಲ್ಲೆಡೆ ಸಂಭ್ರಮದಲ್ಲಿ ನಡೆಯುತ್ತಿದ್ದು, ಈ ಮೂಲಕ ರಾಷ್ಟ್ರಪ್ರೇಮವನ್ನು ತೋರಲಾಗುತ್ತಿದೆ. ಈ ಸಂಭ್ರಮದ ಕ್ಷಣದಲ್ಲಿ ಪುಟ್ಟ ಮಗುವಿನ ರಾಷ್ಟ್ರಪ್ರೇಮ ಎಲ್ಲರ ಮನಸ್ಸು ಗೆದ್ದಿದೆ.

ಹೌದು , ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನಾ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ನಿಮಿತ್ತ ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

 

ಈ ವೇಳೆ ವಿಮಾನ ನಿಲ್ದಾಣದ ಹೊರಗೆ ಗನ್ ಹಿಡಿದು ಭದ್ರತೆಯಲ್ಲಿದ್ದಂತ ಸೈನಿಕರನ್ನು ಕಂಡ ಪುಟ್ಟ ಮಗುವೊಂದು, ತನ್ನ ಕೈಯಲ್ಲಿ ಹಿಡಿದಿದ್ದ ರಾಷ್ಟ್ರಧ್ವಜವನ್ನು ನೀಡಿದೆ. ಅಲ್ಲದೆ ಮಗುವಿನ ಕೈಯಿಂದ ರಾಷ್ಟ್ರಧ್ವಜವನ್ನು ಪಡೆದ ಸೈನಿಕರು, ರಾಷ್ಟ್ರಧ್ವಜಕ್ಕೆ ಗೌರವ ವಂದನೆಯ ಸಲುವಾಗಿ ಮಗುವಿಗೆ ಸೆಲ್ಯೂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆ ಪುಟ್ಟ ಮಗು ಕೂಡ ಸೆಲ್ಯೂಟ್ ಮಾಡಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡುವಂತ ನೆಟ್ಟಿಗರೆಲ್ಲರೂ ಮಗುವಿನ ರಾಷ್ಟ್ರಪ್ರೇಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!