Wednesday, February 28, 2024

ಉಚಿತ ಭಾಗ್ಯಗಳನ್ನು ಪ್ರಶ್ನಿಸಿದ ಯೋಧರು: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭಾಗ್ಯಗಳನ್ನು ಘೋಷಿಸಿದೆ. ಇದು ಬರೀ ಘೋಷಣೆಯಲ್ಲ ವೋಟಿಗಾಗಿ ನೋಟು ಎಂದು ನಾಲ್ವರು ಯೋಧರು ಆರೋಪಿಸಿದ್ದಾರೆ.

ನಿವೃತ್ತ ಯೋಧರಾದ ಬ್ರಿಗೇಡಿಯರ್ ರವಿ ಮುನಿಸ್ವಾಮಿ, ನಯೀಬ್ ಸುಬೇದಾರ್, ರಮೇಶ್ ಜಗಥಾಪ್, ಮಣಿಕಂಠ ಹಾಗೂ ಹವಾಲ್ದಾರ ಬಸಪ್ಪ ಪಟ್ಟಣಶೆಟ್ಟಿ ಹೈಕೋರ್ಟ್‌ಗೆ ಪಬ್ಲಿಕ್ ಇಂಟ್ರೆಸ್ಟ್ ಲಿಟಿಗೇಷನ್(ಪಿಐಎಲ್‌) ದಾಖಲಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಅಥವಾ ಚುನಾವಣೆ ನಂತರ ಏನನ್ನೇ ಫ್ರೀಯಾಗಿ ಕೊಟ್ಟರೂ ಅದು ಟ್ರೆಂಡ್ ಆಗುತ್ತಿದೆ. ಚುನಾವಣೆಯ ನಂತರ ಸರ್ಕಾರ ಅಧಿಕಾರಕ್ಕೆ ಬಂದಾಗ ಉಚಿತ, ಉಡುಗೊರೆಗಳನ್ನು ನೀಡುವುದಾಗಿ ಭವರಸೆ ನೀಡುತ್ತಿವೆ. ಇದು ಪ್ರಜಾಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವೋಟಿಗಾಗಿ ನೋಟು ಅಲ್ಲದೇ ಬೇರೇನೂ ಅಲ್ಲ ಎಂದು ಆರೋಪ ಮಾಡಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೃಹಲಕ್ಷ್ಮಿ, ಗೃಹಜ್ಯೋತಿ, ಗೃಹಶಕ್ತಿಯಂಥ ಉಚಿತ ಭರವಸೆಗಳನ್ನು ನೀಡಿದೆ. ಈ ರೀತಿ ಉಚಿತಗಳಿಂತ ನ್ಯಾಯಸಮ್ಮತ ಚುನಾವಣೆ ನಿರೀಕ್ಷೆ ಸಾಧ್ಯವಿಲ್ಲ ಎಂದು ಪಿಎಲ್‌ಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!