ಮೊಗಾದಿಶುವಿನ ಹೋಟೆಲ್ ಮೇಲೆ ಉಗ್ರರ ದಾಳಿ: 8 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿರುವ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ ಶಬಾಬ್ ಭಯೋತ್ಪಾದಕರು ಶನಿವಾರ (20,2022) ಮೊಗಾದಿಶುವಿನಲ್ಲಿರುವ ಹಯಾತ್ ಹೋಟೆಲ್ ಮೇಲೆ ದಾಳಿ ನಡೆಸಿ, 8 ಮಂದಿ ಅಮಾಯಕರನ್ನು ಬಲಿ ಪಡೆದಿದ್ದಾರೆ.

ಮಾರಕಾಸ್ತ್ರಗಳೊಂದಿಗೆ ಹೋಟೆಲ್‌ಗೆ ನುಗ್ಗಿದ ಉಗ್ರರು ಅಲ್ಲಿದ್ದ ಕೆಲವರನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಫೀಲ್ಡ್‌ಗಿಳಿದು ಇಬ್ಬರ ನಡುವೆ ಗುಂಡಿನ ಕಾಳಗ ನಡೆದಿದೆ. ಇದಕ್ಕೂ ಮೊದಲು ಹೊಟೇಲ್‌ನಲ್ಲಿ ಭಾರೀ ಸ್ಪೋಟ ಕೂಡ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಉಗ್ರರ ವಿರುದ್ಧ ಸೆಣಸಾಟ ನಡೆಸಿದ್ದರಿಂದ ಸಾವುನೋವುಗಳು ನಿಯಂತ್ರಣಕ್ಕೆ ಬಂದಿವೆ. ಭದ್ರತಾ ಪಡೆ ಬಂದೂಕುಧಾರಿಗಳ ಹಿಡಿತದಿಂದ ಅನೇಕ ಜನರನ್ನು ರಕ್ಷಿಸಿವೆ ಎಂದು ಭದ್ರತಾ ಪಡೆಗಳ ಅಧಿಕಾರಿ ಮೊಹಮ್ಮದ್ ಅಬ್ದಿಕಾದಿರ್ ಹೇಳಿದ್ದಾರೆ. ಉಗ್ರರು ಇನ್ನೂ ಕಟ್ಟಡದೊಳಗೆ ಅಡಗಿಕೊಂಡಿದ್ದು ಕ್ಷಿಪ್ರ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಈ ಅಲ್-ಶಬಾಬ್ ಸಂಘಟನೆ ಕಳೆದ 10 ವರ್ಷಗಳಿಂದ ಸೊಮಾಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಅದರ ಸಲುವಾಗಿಯೇ ಇಂತಹ ಹೇಯ ಕೃತ್ಯಕ್ಕೆ ಕೈ ಹಾಕಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!