July 23, 2026
Thursday, July 23, 2026
spot_img

ಮೋಡ ಕವಿದ ವಾತಾವರಣ ಕೆಲವರಿಗೆ ತುಂಬಾ ಇಷ್ಟ, ಹಲವರ ʼಮೂಡ್‌ʼಗೆ ಕಷ್ಟ! ಇದಕ್ಕೆ ಕಾರಣ ಏನು?

ಬೆಳಗ್ಗೆ ಎದ್ದ ನಂತರ ಒಂದೊಳ್ಳೆ ಸೂರ್ಯನ ಕಿರಣ ಕಿಟಕಿಯಿಂದ ಸಣ್ಣಗೆ ರೂಮ್‌ಗೆ ಎಂಟ್ರಿ ಕೊಡ್ತಾ ಇದ್ರೆ ಬೆಳಗ್ಗೆಯಾಯ್ತು ಅಂತರ್ಥ, ಜೊತೆಗೆ ಸೂರ್ಯನ ಜೊತೆ ಪಾಸಿಟಿವಿಟಿ ಖುಷಿಯೂ ಎಂಟ್ರಿ ಕೊಡುತ್ತದೆ. ದಿನವಿಡೀ ಫ್ರೆಶ್‌ ಆಗಿರ್ತೇವೆ. ಈ ರೀತಿ ವೆದರ್‌ನ್ನು ಪ್ರೀತಿಸೋರಿಗೆ ಮೋಡ ಕವಿದ ವಾತಾವರಣ ಇಷ್ಟವೇ ಇಲ್ಲ. ದಿನವಿಡೀ ಒಂಥರಾ ಮೂಡಿ ವೆದರ್‌ಗೆ ಲೈಫ್‌ ಮೂಡಿ ಆಗಿಬಿಡುತ್ತದೆ. ವೆದರ್‌ ಸೂಪರ್‌ ಆಗಿದೆ ಎಂದು ಸುತ್ತಾಡೋಕೆ ಹೋಗೋದು, ಖಾರಖಾರದ ಪದಾರ್ಥಗಳನ್ನು ತಿಂದು ಎಂಜಾಯ್‌ ಮಾಡೋ ಜನ ಒಂದುಕಡೆಯಾದ್ರೆ, ಬೆಚ್ಚಗೆ ಹೊದ್ದು ಮಲ್ಕೊಳೋರು ಇನ್ನೊಂದು ಕಡೆ. ಇವರಿಬ್ಬರನ್ನೂ ಬಿಟ್ಟರೆ ವೆದರ್‌ ಹೇಗೇ ಇರಲಿ, ಮೂಡ್‌ ಹೇಗೇ ಇರಲಿ ನಮಗೇನೂ ಅಫೆಕ್ಟ್‌ ಆಗೋದಿಲ್ಲ ಅಂತ ಪಟಪಟ ರೆಡಿಯಾಗಿ ಆಫೀಸ್‌ಗೆ ಹೊರಟುಬಿಡುತ್ತಾರೆ.

ಈ ಮೋಡ ಕವಿದ ವಾತಾವರಣ ಕೆಲವರಿಗೆ ಯಾಕಿಷ್ಟ ಆಗೋದಿಲ್ಲ?

ಸೂರ್ಯನ ಕಿರಣಗಳ ಕೊರತೆಯಿಂದ ಸೆರಟೋನಿನ್‌ ಕಡಿಮೆಯಾಗುತ್ತದೆ. ಇದು ಕಡಿಮೆಯಾದರೆ ನಿದ್ದೆ ತರಿಸುವ ಹಾರ್ಮೋನ್‌ ಹೆಚ್ಚಾಗುತ್ತದೆ. ಹೀಗಾಗಿ ಈ ವೆದರ್‌ನಲ್ಲಿ ಕೆಲಸ ಮಾಡೋಕೆ ಇಷ್ಟವಾಗೋದಿಲ್ಲ. ಜೀವನದಲ್ಲಿ ನನಗೇ ಎಲ್ಲಾ ಕಷ್ಟಗಳೂ ಇವೆ ಎನ್ನುವ ಭಾವನೆ ಬರುತ್ತದೆ.

ನಮ್ಮ ದೇಹದ ಇಂಟರ್ನಲ್‌ ಬಾಡಿ ಕ್ಲಾಕ್‌ ಬೆಳಕಿನ ಮೇಲೆ ಡಿಪೆಂಡ್‌ ಆಗಿರುತ್ತದೆ. ಬೆಳಕು ಕಡಿಮೆ ಇದ್ರೆ ದೇಹ ರೆಸ್ಟ್‌ ಕೇಳುತ್ತದೆ. ಹೀಗಾಗಿ ಇಡೀ ದಿನ ಮೋಟಿವೇಟ್‌ ಆಗೋದು ಕಷ್ಟ.

ಈ ವಾತಾವರಣ ಯಾಕಿಷ್ಟ?
ಕೆಲವು ಮಂದಿಗೆ ಬಿಸಿಲಿನ ಬದಲು ಈ ರೀತಿ ವಾತಾವರಣ ಇದ್ರೆ ಕ್ಲಿಯರ್‌ ಆಗಿ ಥಿಂಕ್‌ ಮಾಡೋಕೆ ಸಾಧ್ಯವಾಗುತ್ತದೆ. ಹೊಸ ಹೊಸ ಐಡಿಯಾಗಳು ಹುಟ್ಟುತ್ತವೆ.

ಮಳೆ, ಗಾಳಿಯ ಸದ್ದು ಹಲವರಿಗೆ ನೆಮ್ಮದಿ ನೀಡುತ್ತದೆ. ಈ ಸಮಯದಲ್ಲಿ ಹಲವರಿಗೆ ಖುಷಿಯಾಗುತ್ತದೆ. ಭಾವನೆಗಳು, ಎಮೋಷನಲ್‌ ಸೈಡ್‌ ಓಪನ್‌ ಅಪ್‌ ಆಗುತ್ತದೆ.

ಮನೆಯಲ್ಲಿ ಏನೂ ಮಾಡದೇ ಸುಮ್ಮನೆ ಕೂರೋದಕ್ಕೆ ಗಿಲ್ಟ್‌ ಆಗೋದಿಲ್ಲ. ಇನ್ನೂ ಸ್ಲೋ ಆಗೋಣ ಪುಸ್ತಕ ಓದೋಣ, ಕಾಫಿ ಕುಡಿಯೋಣ ನಮ್ಮ ಹವ್ಯಾಸಗಳಿಗೆ ಸಮಯ ನೀಡೋಣ ಎನಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !