Wednesday, June 7, 2023

Latest Posts

ಯಾರೋ ಒಬ್ಬರು ಅತಂತ್ರ ಪರಿಸ್ಥಿತಿ ಬರಲಿ, ನಾನೇ ಸಿಎಂ ಆಗಬಹುದು ಎಂದು ಕನಸು ಕಾಣುತ್ತಿದ್ದಾರೆ: HDK ವಿರುದ್ಧ ಸುಮಲತಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಕಳೆದ ಬಾರಿ ಮಂಡ್ಯದಲ್ಲಿ ಆಯ್ಕೆಯಾಗಿದ್ದ 7 ಶಾಸಕರು ಯಾವ ಸಾಧನೆ ಮಾಡಿದ್ದಾರೆ? ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಾದ ಕಾಲ ಬಂದಿದೆ ಎಂದು ಸಂಸದೆ ಸುಮಲತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಸುಮಲತಾ, ಕಳೆದ ಚುನಾವಣೆಯಲ್ಲಿ 7ಕ್ಕೆ 7 ಶಾಸಕರನ್ನು ಆಯ್ಕೆ ಮಾಡಿದ್ರಿ. ಅವರೆಲ್ಲ ಯಾವ ಅಭಿವೃದ್ಧಿ ಕೆಲಸವನ್ನು ಮಾಡಿದರು? ಈ ಬಾರಿ ಬದಲಾವಣೆಯನ್ನು ತರಬೇಕಿದೆ ಎಂದು ಹೇಳಿದರು.

ಯಾರೋ ಒಬ್ಬರು ಕನಸು ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಬರಲಿ, ಆಗ ನಾನೇ ಸಿಎಂ ಆಗಬಹುದು ಎಂದು ಕಾಯ್ತಾ ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಆ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!