Saturday, February 4, 2023

Latest Posts

SHOCKING NEWS | ಮ್ಯಾಡ್ರಿಡ್’ನಲ್ಲಿ ‘ಲೆಟರ್ ಬಾಂಬ್’ ಸ್ಫೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸ್ಪೇನ್’ನ ಮ್ಯಾಡ್ರಿಡ್‌ನಲ್ಲಿರುವ ಉಕ್ರೇನಿಯನ್ ರಾಯಭಾರ ಕಚೇರಿಯಲ್ಲಿ ಲೆಟರ್ ಬಾಂಬ್ ಸ್ಫೋಟ ವರದಿಯಾಗಿದೆ.

ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲಾರಾಂ ಮೊಳಗಿದ್ದು, ರಾಯಭಾರಿ ಕಚೇರಿಯ ಸಿಬ್ಬಂದಿ ಪತ್ರವನ್ನು ತೆರೆಯಲು ಯತ್ನಿಸಿದಾಗ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಹಲವಾರು ಗಾಯಗೊಂಡಿದ್ದಾರೆ.

ಗಾಯಗೊಂಡ ರಾಯಭಾರ ಕಚೇರಿಯ ಉದ್ಯೋಗಿಯನ್ನ ರಾಜಧಾನಿಯ ನುಯೆಸ್ಟ್ರಾ ಸಿಯೋರಾ ಡಿ ಅಮೆರಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಘಟನೆಯು ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದೊಂದಿಗೆ ಸಂಬಂಧ ಹೊಂದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!