November 6, 2026
Friday, November 6, 2026
spot_img

ಉತ್ತರಾಖಂಡದ ಹೆಲಿಕಾಪ್ಟರ್‌ ದುರಂತದಲ್ಲಿ ಮಗ ಸಾ*ವು: ಪುತ್ರನ ಅಗಲಿಕೆ ತಾಳಲಾರದೇ ತಂದೆ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಉದ್ಯಮಿ ಪ್ರತಾಪ್‌ ಗೌಡ ಮೃತಪಟ್ಟಿದ್ದರು. ಅವರ ಸಾವಿನ ನೋವು ತಾಳಲಾರದೇ ತಂದೆ ನಿಂಗರಾಜು ಅವರು ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ತೀವ್ರ ಅನಾರೋಗ್ಯ ಹಾಗೂ ಮಗನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾಗಿದ್ದ ನಿಂಗರಾಜು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಹಾಸನ ತಾಲೂಕಿನ ಜೋಡಿ ಕೃಷ್ಣಾಪುರದಲ್ಲಿ ಟೈಲರ್ ಆಗಿ ವೃತ್ತಿಜೀವನ ಆರಂಭಿಸಿದ್ದ ನಿಂಗರಾಜು, ನಂತರ ಸಕಲೇಶಪುರ ತಾಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಅವರ ಪುತ್ರ ಪ್ರತಾಪ್ ಗೌಡ ಬೆಂಗಳೂರಿಗೆ ತೆರಳಿ ಕಂಟ್ರಾಕ್ಟರ್ ಹಾಗೂ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದರು.

ಬೆಳೆದ ಮಗ ಕಣ್ಣೆದುರೇ ಮೃತಪಟ್ಟಿದ್ದನ್ನು ಅವರಿಂದ ಜೀರ್ಣಿಸಿಕೊಳ್ಳಲು ಆಗಲೇ ಇಲ್ಲ. ಅನಾರೋಗ್ಯದ ಜೊತೆ ಜೀವನ ಮಾಡುವ ಆಸೆಯನ್ನು ಅವರು ಬಿಟ್ಟಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ಇಂದು ಅವರ ಸ್ವಗ್ರಾಮ ಬಾಚಿಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Must Read