June 26, 2026
Friday, June 26, 2026
spot_img

SHOCKING| ವಯಸ್ಸು 40 ಆದ್ರೂ ಮದುವೆ ಮಾಡಿಸಿಲ್ಲ ಎಂದು ತಾಯಿಯನ್ನೇ ಕೊಂದ ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

40 ವರ್ಷವಾದ್ರೂ ಇನ್ನೂ ಮದುವೆ ಮಾಡಿಸಿಲ್ಲ ಎಂದು ಸಿಟ್ಟಿನಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಈ ಘಟನೆ ನಡೆದಿದೆ. ಗಂಗಮ್ಮ (65) ಕೊಲೆಯಾದ ಮಹಿಳೆ, ಉಮಾಶಂಕರ್‌ (40) ತಾಯಿಯನ್ನ ಕೊಂದ ಪುತ್ರ.

ಕಳೆದ ವರ್ಷ ಕುಂಭಮೇಳಕ್ಕೆ ಹೋಗಿದ್ದ ಉಮಾಶಂಕರ್‌ ತಲೆಗೆ ಪೆಟ್ಟು ಬಿದ್ದಿತ್ತು. ಆಗಾಗ ಬುದ್ಧಿಭ್ರಮಣೆಯಾದಂತೆ ಆತ ವರ್ತಿಸುತ್ತಿದ್ದ. ನನಗೆ ಮದುವೆ ಮಾಡಿಸು ಎಂದು ತಾಯಿಯನ್ನು ಪೀಡಿಸಿದ್ದಾನೆ. ಮಾರ್ಚ್‌ 26 ರಂದು ಕೂಡ ತಾಯಿ ಗಂಗಮ್ಮರೊಂದಿಗೆ ಮದುವೆ ವಿಚಾರಕ್ಕೆ ಜಗಳ ತೆಗೆದಿದ್ದನಂತೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲು ಕೈನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆಕೆ ಕುಸಿದು ಬಿದ್ದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗಂಗಮ್ಮ ಅವರನ್ನ ಐಸಿಯುಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಾ.30 ರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !