Wednesday, August 17, 2022

Latest Posts

ತಾಯಿಗೆ ಜೀಪ್‌ನಿಂದ ಗುದ್ದಿಸಿ ಕೊಲೆ ಮಾಡಿದ ಪುತ್ರ

ಹೊಸದಿಗಂತ ವರದಿ,ಮೈಸೂರು:

ನಡೆದುಕೊಂಡು ಹೋಗುತ್ತಿದ್ದ ತನ್ನ ತಾಯಿಗೆ ಪುತ್ರನೊಬ್ಬ ಜೀಪ್ ನಿಂದ ಗುದ್ದಿಸಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಗುರುವಾರ ನಡೆದಿದೆ.
ನಾಗಮ್ಮ(65) ಹತ್ಯೆಯಾದ ತಾಯಿ. ಮೃತಳ ಪುತ್ರ ಹೇಮರಾಜ್(45) ಎಂಬಾತನೇ ಕೃತ್ಯವೆಸಗಿದ ಆರೋಪಿ. ಹಣಕಾಸಿನ ವಿಚಾರಕ್ಕೆ ಸಂಬoಧಿಸಿದoತೆ ತಾಯಿ ಮಗನ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಇಂದು ತಾಯಿಯ ವಿರುದ್ಧ ಕುಪಿತಗೊಂಡಿದ್ದ ಮಗ ಹೇಮರಾಜ್, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ತಾಯಿ ನಾಗಮ್ಮಗೆ ಟ್ರಾವೆಲ್ ಜೀಪ್ ನಿಂದ ಡಿಕ್ಕಿಹೊಡೆಸಿದ್ದಾನೆ.
ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ನಾಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಬೆಟ್ಟದಪುರ ಠಾಣೆಯ ಪೊಲೀಸರು ಆರೋಪಿ ಹೇಮರಾಜನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!