ಮಗನಿಗೆ ಪುನಿತ್ ರಾಜಕುಮಾರ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ!

ಹೊಸದಿಗಂತ ವರದಿ,ಕಲಬುರಗಿ:

ಖ್ಯಾತ ನಟ ದಿ,ಪುನಿತ್ ರಾಜಕುಮಾರ ಅಭಿಮಾನಿಗಳ ದಂಪತಿಗಳು ಒಬ್ಬರು ತಮ್ಮ‌ ಪುತ್ರನಿಗೆ ಪುನಿತ್ ರಾಜಕುಮಾರ ಎಂದು ನಾಮಕರಣ ಮಾಡಿ ಅಭಿಮಾನ ಮೇರೆದಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ನಿವಾಸಿಗಳಾದ ಸಿದ್ದು ಮತ್ತು ಕಾವೇರಿ ದಂಪತಿ ತಮ್ಮ ಮೊದಲನೇ ಮಗನಿಗೆ ಪುನಿತ್ ರಾಜಕುಮಾರ ಎಂದು ನಾಮಕರಣ ಮಾಡಿದ್ದಾರೆ.
ಡಿಸೆಂಬರ್ 5 ರಂದು ಗಂಡು ಮಗು ಜನನವಾಗಿತ್ತು. ಹೆರಿಗೆಗೂ ಮೊದಲೇ ಗಂಡು ಮಗುವಾದರೆ, ಪುನಿತ್ ರಾಜಕುಮಾರ ಹೆಸರು ಇಡುವ ಬಗ್ಗೆ ದಂಪತಿ ನಿರ್ಧಾರ ಮಾಡಿದ್ದರು. ಅದರಂತೆ ಮಗುವಿಗೆ ನಾಮಕರಣ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಎಂದು ನಾಮಕರಣ ಮಾಡಿದ್ದಕ್ಕೆ, ದಂಪತಿಗಳ ಅಭಿಮಾನಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!