ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ನನ್ನು ನೋಡಲು ಬಳ್ಳಾರಿ ಜೈಲಿಗೆ ಪುತ್ರ ವಿನೀಶ್ ಮತ್ತು ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ಅಪ್ಪನನ್ನು ನೋಡಲು ಬಳ್ಳಾರಿಗೆ ಜೈಲಿಗೆ ವಿನೀಶ್ ಭೇಟಿ ಕೊಟ್ಟಿದ್ದಾನೆ.
ದರ್ಶನ್ ಜೈಲು ಸೇರಿ 3 ತಿಂಗಳಿಗಿಂತ ಅಧಿಕವಾಗಿದೆ. ಕಾನೂನು ಸಮರದ ಕುರಿತು ಚರ್ಚಿಸಲು ಪ್ರತಿ ವಾರ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತಿದ್ದರು. ಈ ಬಾರಿ ಅಮ್ಮನ ಜೊತೆ ಪುತ್ರ ವಿನೀಶ್ ಕೂಡ ಭೇಟಿ ನೀಡಿದ್ದಾರೆ. ಈ ವೇಳೆ, ದರ್ಶನ್‌ಗೆ ಅಗತ್ಯವಿರುವ ಬಟ್ಟೆ, ಬೆಡ್‌ಶಿಟ್ ಮತ್ತು ಬೇಕರಿ ತಿನಿಸುಗಳೊಂದಿಗೆ 2 ಬ್ಯಾಗ್ ಹಿಡಿದು ಆಪ್ತರೊಂದಿಗೆ ಪತ್ನಿ, ಪುತ್ರ ಜೈಲಿಗೆ ಆಗಮಿಸಿದ್ದಾರೆ.