ಡೆಂಜರಸ್‌ ಡ್ರಗ್ಸ್‌ ನೀಡಿ ಸೋನಾಲಿ ಫೋಗಟ್‌ ಹತ್ಯೆ: ಪೊಲೀಸರಿಂದ ಸ್ಫೋಟಕ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ನಾಯಕಿ ಸೋನಾಲಿ ಫೋಗಟ್‌ಗೆ ಸಾವಿಗೆ ಮನರಂಜನಾ ಮಾದಕ ದ್ರವ್ಯ ಮೆಥಾಂಫೆಟಮೈನ್ ಕಾರಣ ಎಂದು ಸ್ಫೋಟಕ ಮಾಹಿತಿಯನ್ನು ಗೋವಾ ಪೊಲೀಸರು ನೀಡಿದ್ದಾರೆ.

ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಕರ್ಲೀಸ್ ಬೀಚ್ ಶಾಕ್ ರೆಸ್ಟೋರೆಂಟ್‌ನಲ್ಲಿ ಸೋನಾಲಿ ಫೋಗಟ್‌ಗೆ ಮನರಂಜನಾ ಡ್ರಗ್ ಮೆಥಾಂಫೆಟಮೈನ್ ನೀಡಿದ್ದಾರೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುಧೀರ್ ಸಾಂಗ್ವಾನ್ ಬಹಿರಂಗಪಡಿಸಿದ ಆಧಾರದ ಮೇಲೆ ಸೋನಾಲಿ ಫೋಗಟ್ʼಗೆ ನೀಡಲಾದ ಮಾದಕವಸ್ತುಗಳನ್ನ ಕರ್ಲೀಸ್ ರೆಸ್ಟೋರೆಂಟ್‌ನ ವಾಶ್‌ ರೂಂನಿಂದ ವಶಪಡಿಸಿಕೊಳ್ಳಲಾಗಿದೆ. ಈ ಡ್ರಗ್ಸ್ʼನ್ನ ಮೆಟಾಮೆಂಫಟಮೈನ್ ಎಂದು ಗುರುತಿಸಲಾಗಿದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!