Wednesday, October 5, 2022

Latest Posts

ಲೈಂಗಿಕ ದೌರ್ಜನ್ಯ ಆರೋಪ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಕೇಸು ದಾಖಲು

ಹೊಸದಿಗಂತ ವರದಿ, ಚಿತ್ರದುರ್ಗ:

ಮುರುಘಾಮಠದ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಕುರಿತು ಪ್ರಕರಣ ದಾಖಲಿಸಲಾಗಿದೆ. ಮುರುಘಾಮಠದಲ್ಲಿರುವ ಬಾಲಕಿಯರ ವಿದ್ಯಾರ್ಥಿನಿಲಯದ ನಿಲಯಪಾಲಕಿ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿಲಯದ ತಪಾಸಣೆ ನೆಪದಲ್ಲಿ ಎಸ್.ಕೆ.ಬಸವರಾಜನ್ ಅವರು ತನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಿದ್ದರು. ಜುಲೈ ೨೭ ರಂದು ಸಂಜೆ ೬ ಗಂಟೆ ಸುಮಾರಿನಲ್ಲಿ ಎಸ್.ಕೆ.ಬಸವರಾಜನ್ ವಿದ್ಯಾರ್ಥಿನಿಲಯಕ್ಕೆ ಬಂದಿದ್ದರು. ಅಲ್ಲಿ ಯಾರೂ ಇಲ್ಲದ್ದನ್ನು ಗಮಿಸಿದ ಬಸವರಾಜನ್ ನನ್ನ ದೇಹದ ಅಂಗಾಂಗಳನ್ನು ಮುಟ್ಟಿ, ತಬ್ಬಿಕೊಂಡರು. ಅಲ್ಲದೇ ನಮ್ಮ ಮೇಲೆ ಬಲತ್ಕಾರ ನಡೆಸಲು ಪ್ರಯತ್ನಿಸಿದರು. ಇದನ್ನು ವಿರೋಧಿಸಿದ ನನಗೆ ಕೊಲೆ ಬೆದರಿಕೆ ಹಾಕಿದರು ಎಂದು ನಿಲಯಪಾಲಕಿ ದೂರಿನಲ್ಲಿ ಆರೋಪಿಸಿದ್ದಾರೆ.
ಮುರುಘಾಮಠದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಜುಲೈ ೨೪ ರಂದು ಗೇಟ್‌ಪಾಸ್ ಪಡೆದು ಹೊರಗೆ ಹೋಗಿದ್ದರು. ಹೀಗೆ ಹೋದ ಬಾಲಕಿಯರು ಅದೇ ದಿನ ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದರು. ಈ ಕುರಿತು ಮುರುಘಾಮಠ ಹಾಗೂ ಆಡಳಿತಾಧಿಕಾರಿ ಎಸ್.ಕೆ.ಬಸವರಾಜ್ ಅವರಿಗೆ ಪೊಲೀಸರು ಮಾಹಿತಿ ನೀಡಿದ್ದರು.
ವಿಷಯ ತಿಳಿದ ಎಸ್.ಕೆ.ಬಸವರಾಜನ್ ತಮ್ಮ ಪತ್ನಿ ಸೌಭಾಗ್ಯ ಅವರ ಜೊತೆಗೂಡಿ ಕಾಟನ್‌ಪೇಟೆ ಪೊಲೀಸ್ ಠಾಣೆಗೆ ತೆರಳಿ ಜುಲೈ ೨೫ ರಂದು ಇಬ್ಬರು ಬಾಲಕಿಯರನ್ನು ಕರೆದುಕೊಂಡು ಬಂದಿದ್ದಾರೆ. ಈ ಇಬ್ಬರು ಬಾಲಕಿಯರನ್ನು ಅವರ ಪೋಷಕರು ಅಥವಾ ವಿದ್ಯಾರ್ಥಿನಿಲಯಕ್ಕೆ ಒಪ್ಪಿಸದೆ ಬಸವರಾಜನ್ ಜುಲೈ ೨೭ ರವರೆಗೆ ಅನಧಿಕೃತವಾಗಿ ತಮ್ಮ ವಶದಲ್ಲಿಟ್ಟುಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!