Thursday, March 30, 2023

Latest Posts

ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಹಾಡಿನ ಚಿತ್ರೀಕರಣ: ಗಾಯಕಿ ಮಂಗ್ಲಿ ವಿರುದ್ಧ ಭಕ್ತರು ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವರಾತ್ರಿ (Shivaratri 2023) ಪ್ರಯುಕ್ತ ಪ್ರಸಿದ್ಧ ಗಾಯಕಿ ಮಂಗ್ಲಿ (Singer Mangli) ಅವರು ‘ಭಂ ಭಂ ಭೋಲೆ..’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಈ ಹಾಡನ್ನು ಒಂದಿಷ್ಟು ಅಭಿಮಾನಿಗಳು ಇಷ್ಟ ಪಟ್ಟಿದ್ದು, ಒಂದಷ್ಟು ಜನರು ಗರಂ ಆಗಿದ್ದಾರೆ.

ಈ ಹಾಡನ್ನು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ (Srikalahasti Temple) ಚಿತ್ರೀಕರಣ ಮಾಡಿರುವುದರಿಂದ ವಿವಾದ ಹುಟ್ಟಿಕೊಂಡಿದೆ.
ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ಇರುವ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಅಸಂಖ್ಯಾತ ಭಕ್ತರು ಭೇಟಿ ನೀಡುತ್ತಾರೆ. ಶಿವ ಭಕ್ತರ ಪಾಲಿಗೆ ಇದು ಪವಿತ್ರ ಕ್ಷೇತ್ರ. ಅದ್ದೂರಿಯಾಗಿ ಇಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ. ದೇವಸ್ಥಾನದ ಒಳಗೆ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಇಲ್ಲ. ಭಕ್ತಾದಿಗಳು ಮೊಬೈಲ್​ನಲ್ಲೂ ಚಿತ್ರೀಕರಿಸುವಂತಿಲ್ಲ. ಆದರೆ ಈ ನಿಯಮವನ್ನು ಗಾಯಕಿ ಮಂಗ್ಲಿ ಮತ್ತು ಅವರ ತಂಡದವರು ಮುರಿದಿದ್ದಾರೆ.

ಶಿವರಾತ್ರಿ ಹಬ್ಬಕ್ಕಿಂತಲೂ ಕೆಲವೇ ದಿನಗಳ ಮುನ್ನ ಮಂಗ್ಲಿ ಅವರು ಶ್ರೀಕಾಳಹಸ್ತಿ ದೇವಸ್ಥಾನದಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ. ದೇಗುಲದ ಪ್ರಮುಖ ಜಾಗಗಳಲ್ಲಿ ಅವರು ಹಾಡಿ, ಕುಣಿದಿದ್ದಾರೆ. ಹಾಗಾದರೆ ಅವರಿಗೆ ಅನುಮತಿ ಕೊಟ್ಟವರು ಯಾರು? ಮಂಗ್ಲಿಗೆ ಒಂದು ನ್ಯಾಯ, ಭಕ್ತಾದಿಗಳಿಗೆ ಇನ್ನೊಂದು ನ್ಯಾಯವೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಶ್ರೀಕಾಳಹಸ್ತಿ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಇದಕ್ಕೆ ಉತ್ತರಿಸಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!