Friday, March 31, 2023

Latest Posts

ತಂದೆಗೆ ಲಿವರ್ ದಾನ ಮಾಡಿದ 17 ವರ್ಷದ ಬಾಲಕಿ: ಭಾರತದ ಅತ್ಯಂತ ಕಿರಿಯ ದಾನಿ ಎನ್ನುವ ಹೆಗ್ಗಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಂದೆಗೆ 17 ವರ್ಷದ ಬಾಲಕಿ ಲಿವರ್ ದಾನ ಮಾಡಿದ್ದಾಳೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಕಾನೂನಿನಲ್ಲಿ ಅಪ್ರಾಪ್ತ ವಯಸ್ಸಿನವರು ಬೇರೊಬ್ಬರಿಗೆ ಅಂಗಾಂಗ ದಾನ ಮಾಡುವುದು ಅವಕಾಶ ಇಲ್ಲ. ಹೀಗಾಗಿ ದೇವಾನಂದಾ ಕೇರಳ ಹೈ ಕೋರ್ಟ್ ಮೆಟ್ಟಿಲೇರಿದ್ದಳು. ವಿದ್ಯಾರ್ಥಿ ಕೋರಿದ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಲಿವರ್ ದಾನ ಮಾಡಲು ಅನುಮತಿ ನೀಡಿತ್ತು.ಇದಾದ ಬಳಿಕ ದೇವಾನಂದಾ ತನ್ನ ವಿವರ್ ದಾನ ಮಾಡಲು ವೈದ್ಯರ ಸಲಹೆಯಂತೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಳು. ಅಲ್ಲದೇ ಜಿಮ್​ನಲ್ಲಿ ವರ್ಕೌಟ್​ ಸಹ ಮಾಡಿದ್ದಳು. ಈ ಬಾಲಕಿ ಕೊಟ್ಟ ಪರಿಶ್ರಮವನ್ನು ಆಸ್ಪತ್ರೆ ವೈದ್ಯರು ಮೆಚ್ಚಿ ಯಾವುದೇ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಫೆ.9ರಂದು ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಈ ಮೂಲಕ ದೇವಾನಂದ, ಭಾರತದ ಅತ್ಯಂತ ಕಿರಿಯ ಜೀವಂತ ಅಂಗಾಂಗ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಇತ್ತೀಚೆಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜೀವ ನೀಡಿರುವ ಅವರ ಪುತ್ರಿ ರೋಹಿಣಿ ಆಚಾರ್ಯ ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!