Thursday, March 23, 2023

Latest Posts

ಸೋನಿಯಾ ಗಾಂಧಿ ಆಪ್ತ , ಕೇಂದ್ರ ಮಂತ್ರಿ ಎಂದು ವಂಚನೆ: ಕೊನೆಗೂ ಖದೀಮನ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಕೇಂದ್ರ ಸರ್ಕಾರದಲ್ಲಿ ತಾನು ಮಂತ್ರಿ ಎಂದು ಎಂದು ಹೇಳುತ್ತಾ ಓಡಾಡಿಕೊಂಡು ಹಲವರನ್ನು ವಂಚಿಸಿದ ಖದೀಮನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರದಲ್ಲಿ ಕೆಲಸ, ವರ್ಗಾವಣೆ ಸೇರಿದಂತೆ ಯಾವುದೇ ಕೆಲಸಗಳು ನನ್ನ ಮೂಲಕವೇ ನಡೆಯುತ್ತದೆ ಎಂದು ವಂಚಿಸುತ್ತಿದ್ದ ಮೂವರನನ್ನು ಬಂಧಿಸಲಾಗಿದೆ. ಈತನನನ್ನು ಸಂಜಯ್ ತಿವಾರಿ ಎಂದು ಗುರುತಿಸಲಾಗಿದೆ.

ಈತ ಈ ಹಿಂದೆ ಸೋನಿಯಾ ಗಾಂಧಿ ಆಪ್ತ ಎಂದು ಹಲವರಿಗೆ ವಂಚಿಸಿದ್ದ. ಈ ಕುರಿತು ದಾಖಲಾದ ದೂರಿನಲ್ಲಿ 2017ರಲ್ಲಿ ಸಂಜಯ್ ತಿವಾರಿಯನ್ನು ಪೊಲೀಸರು ಬಂಧಿಸಿದ್ದರು.

ಕೇಂದ್ರ ಸರ್ಕಾರದ ಸಚಿವ ಎಂದು ಸಂಜಯ್ ತಿವಾರಿ ಪೋಸ್ ನೀಡಿದ್ದ. ಹಲವು ಉದ್ಯಮಿಗಳು, ಸ್ಟಾರ್ಟ್ಅಪ್ ಕಂಪನಿಗಳ ಹೂಡಿಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸಿದ್ದ. 2017ರಲ್ಲಿ ಬಂಧನ್ನಕ್ಕೊಳಗಾಗಿ ಬಳಿಕ ಬಿಡುಗಡೆಯಾಗಿದ್ದ ಸಂಜಯ್ ತಿವಾರಿ, ಕೆಲ ತಿಂಗಳು ನಾಪತ್ತೆಯಾಗಿದ್ದ. ಬಳಿಕ ಕೇಂದ್ರ ಸಚಿವ ಅನ್ನೋ ನಕಲಿ ನೇಮ್ ಪ್ಲೇಟ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾನೆ.

ದೆಹಲಿ ಪೊಲೀಸರು ಇಂಟೆಲೆಜೆನ್ಸಿ ಎಜೆನ್ಸಿ ಜೊತೆ ವಿಚಾರಣೆ ಆರಂಭಿಸಿದ್ದಾರೆ. ಹಲವು ದಾಖಲೆಗಳನ್ನು ತಿರುಚಿರುವ ಸಾಧ್ಯತೆ ಇದೆ ಅನ್ನೋ ಅನುಮಾನಗಳು ಪೊಲೀಸರನ್ನು ಕಾಡುತ್ತಿದೆ. ಹೀಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!