ಮಗು ಸಾಕಿದ್ದ ಸೋನು ಗೌಡಗೆ ಮತ್ತೆ ಸಂಕಷ್ಟ: 14 ದಿನಗಳ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನುಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಾಮೀನಿಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ರೀಲ್ಸ್‌ ಮಾಡುವ ಸೋನು, ತನ್ನ ರೀಲ್ಸ್‌ನಲ್ಲಿ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿದ್ದರು. ಅದರಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಯಾವುದೇ ಕಾನೂನು ಪ್ರೊಸೀಜರ್ಸ್‌ ಫಾಲೋ ಮಾಡದೆ ಸೋನು ಮಗುವನ್ನು ದತ್ತು ಪಡೆದಿದ್ದಾರೆ ಎನ್ನಲಾಗಿದೆ.

ಏಳು ವರ್ಷದ ಕೂಲಿ ಕಾರ್ಮಿಕರ ಮಗಳಾದ ಸೇವಂತಿ ಎನ್ನುವ ಹುಡುಗಿಯನ್ನು ಸೋನು ದತ್ತು ತೆಗೆದುಕೊಂಡು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!