CINE | ಸದ್ದಿಲ್ಲದೇ ಹಸೆಮಣೆ ಏರಿದ ನಟಿ ತಾಪ್ಸಿ ಪನ್ನು, ಸಾಮಾಜಿಕ ಜಾಲತಾಣಲ್ಲಿ ಒಂದು ಫೋಟೋನೂ‌ ಇಲ್ಲ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲ ದಿನಗಳ ಹಿಂದಷ್ಟೇ ನಟಿ ತಾಪ್ಸಿ ಪನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು.

ಇದೀಗ ವಿದೇಶಿ ಬ್ಯಾಡ್ಮಿಂಟನ್‌ ಆಟಗಾರ ಮಥಿಯಾಸ್‌ ಬೋ ಅವರನ್ನು ವಿವಾಹವಾಗಿದ್ದಾರೆ. ಮಾ.23 ರಂದು ತಾಪ್ಸಿ ಹಸೆಮಣೆ ಏರಿದ್ದು, ಬಾಲಿವುಡ್‌ನ ಕೆಲವೇ ಕೆಲವು ಆಪ್ತರಿಗೆ ಕಾರ್ಡ್‌ ಕಳುಹಿಸಲಾಗಿತ್ತು ಎನ್ನಲಾಗಿದೆ.

ತಾಪ್ಸಿ ತನ್ನ ಮದುವೆಗೆ ಕೆಲವೇ ಕೆಲವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ, ಅನುರಾಗ್​ ಕಶ್ಯಪ್​​, ಕನಿಕಾ ಧಿಲ್ಲೋನ್​ ಇವರ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ತಾಪ್ಸಿ ಮತ್ತು ಮಥಿಯಾಸ್​ ಅನೇಕ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರು.

ಇವರು 2013ರಲ್ಲಿ ಇಂಡಿಯನ್​ ಬ್ಯಾಡ್ಮಿಂಟನ್​​ ಲೀಗ್​ನಲ್ಲಿ ಮೊದಲು ಭೇಟಿಯಾದರು. ಸದ್ಯ ಈ ಜೋಡಿ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಅಂದಹಾಗೆಯೇ ನವ ಜೋಡಿ ಸಿಖ್​ ಮತ್ತು ಕ್ರಿಶ್ಚಿಯನ್​ ಧರ್ಮದ ಪ್ರಕಾರ ಮದುವೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!