Monday, March 27, 2023

Latest Posts

ಬಿಹಾರದ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: ನಾಲ್ವರ ದುರ್ಮರಣ, ಹಲವರಿಗೆ ಗಾಯ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಭಾಗಲ್ಪುರದ ಪಟಾಕಿ ತಯಾರಿಕೆ ನಡೆಸಲಾಗುತ್ತಿದ್ದ ಮನೆಯಲ್ಲಿ ಗುರುವಾರ ಮಧ್ಯರಾತ್ರಿ ಸ್ಫೋಟ ಸಂಭವಿಸಿದೆ. ಈ ಭೀಕರ ದುರಂತದಲ್ಲಿ ನಾಲ್ವರು ಸಾವನ್ನಪ್ಪಿ ಹನ್ನೆರಡು ಜನರು ಗಾಯಗೊಂಡಿದ್ದಾರೆ.
ತಾತಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಜ್ವಾಲಿಚಕ್‌ನಲ್ಲಿರುವ ಮನೆಯೊಂದರಲ್ಲಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಬಾಂಬ್ ಸ್ಫೋಟದ ರಭಸಕ್ಕೆ ಮನೆ ಛಿದ್ರವಾಗಿ ಧರೆಗುರುಳಿದೆ. ಮನೆ ಮಾಲೀಕರು ಅಕ್ರಮವಾಗಿ ಪಟಾಕಿ ತಯಾರಿಕೆಯಲ್ಲಿ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಪಟ್ಟಣದ ಜವಾಹರಲಾಲ್ ನೆಹರು ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾಗಲ್ಪುರ್ ರೇಂಜ್ ಉಪ ಪೊಲೀಸ್ ಮಹಾನಿರೀಕ್ಷಕ ಸುಜಿತ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, “ನಾವು ಇದುವರೆಗೆ ನಾಲ್ಕು ಶವಗಳನ್ನು ಮನೆಯ ಅವಶೇಷಗಳ ಅಡಿಯಿಂದ ಹೊರತೆಗೆದಿದ್ದೇವೆ. ಆ ಮನೆಯಲ್ಲಿ ಪಟಾಕಿ ಮತ್ತು ದೇಸಿ ಬಾಂಬ್ ತಯಾರಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ವಿಧಿವಿಜ್ಞಾನ ಮಾದರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮೃತರಲ್ಲಿ ಈ ವರೆಗೆ ಒಬ್ಬನ ಗುರುತು ಪತ್ತೆಯಾಗಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!