ಒಡಿಶಾ ರೈಲು ದುರಂತ: ಎಲ್ಲರ ಗಮನ ಸೆಳೆಯಿತು ನಟ ಸೋನು ಸೂದ್ ಟ್ವೀಟ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಈಗಾಗಲೇ 280 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರ ಮತ್ತು ಗಾಯಗೊಂಡವರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ರೈಲುಗಳು ಏಕಕಾಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಾಯದ ಮಟ್ಟ ಹೆಚ್ಚಿತ್ತು. ಈ ರೈಲು ಅಪಘಾತದ ಬಗ್ಗೆ ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಪ್ರತಿಕ್ರಿಯಿಸುತ್ತಿದ್ದಾರೆ.

ಆದರೆ ಈ ಅಪಘಾತದ ಬಗ್ಗೆ ನಟ ಸೋನು ಸೂದ್ ಸೆನ್ಸೇಷನಲ್ ಟ್ವೀಟ್ ಮಾಡಿದ್ದು, ಗಾಯಾಳುಗಳ ಮುಂದಿನ ಜೀವನದ ಬಗ್ಗೆ ದೊಡ್ಡ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಆ ವಿಡಿಯೋದಲ್ಲಿ ನಟ ಸೋನು ಸೂದ್ ಹೇಳಿದ್ದು..ʻಅಪಘಾತದ ಬಗ್ಗೆ ತಿಳಿದು ಬಹಳ ದುಃಖವಾಗಿದೆ ಎಂದು ಮಾತನಾಡಿದ ನಟ, ಪ್ರಸ್ತುತ ಸಮಯಕ್ಕೆ ಎಲ್ಲರೂ ಸಹಾನುಭೂತಿ ತೋರಿಸುತ್ತೇವೆ. ಆದರೆ ಶೀಘ್ರದಲ್ಲೇ ಎಲ್ಲವನ್ನು ಮರೆತು ನಾವು ನಮ್ಮ ಕೆಲಸದಲ್ಲಿ ನಿರತರಾಗುತ್ತೇವೆ. ನಂತರ ಯಾರೂ ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಈ ದುರಂತದಲ್ಲಿ ಜೀವನೋಪಾಯವನ್ನು ಕಳೆದುಕೊಂಡವರ ಮುಂದಿನ ಜೀವನ ಹೇಗೆ? ಅವರ ಕುಟುಂಬದ ಸ್ಥಿತಿ ಏನು? ಈ ಅವಘಡದಿಂದ ಹಲವು ಕುಟುಂಬಗಳು ನಷ್ಟವಾಗಿವೆ. ಆ ಕುಟುಂಬಗಳು ಮತ್ತೆ ಎದ್ದು ನಿಲ್ಲುತ್ತವೆಯೇ? ಕೇಂದ್ರ ಹಾಗೂ ರಾಜ್ಯ ಸರಕಾರ ಘೋಷಿಸಿರುವ ಪರಿಹಾರದ ಹಣ ಬೇಗ ಖಾಲಿಯಾಗಲಿದೆ. ನಂತರ ಮತ್ತೆ ಅವರ ಪರಿಸ್ಥಿತಿ ಏನು? ಈ ಅಪಘಾತದಲ್ಲಿ ಕುಟುಂಬಕ್ಕೆ ಆಸರೆಯಾಗಿರುವವರು ತಮ್ಮ ಕಾಲು, ಕೈಗಳನ್ನು ಕಳೆದುಕೊಂಡಿದ್ದಾರೆ. ಸರಕಾರ ನೀಡುವ ಪರಿಹಾರದಿಂದ ಅವರಿಗೆ ನ್ಯಾಯ ಸಿಗುತ್ತದೆಯೇ? ಇಂತಹ ಅವಘಡಗಳು ಸಂಭವಿಸಿದಾಗ ಸರ್ಕಾರಗಳು ಅವರಿಗೆ ಪರಿಹಾರ ನೀಡುವ ಬದಲು ಪಿಂಚಣಿ ಮತ್ತು ಸ್ಥಿರ ಆದಾಯವನ್ನು ನೀಡಬೇಕು. ಹಾಗೆ ಮಾಡಿದರೆ ಅವರಿಗೆ ಭರವಸೆ ನೀಡಿದಂತಾಗುತ್ತದೆʼ ಎಂದರು.

ಒಡಿಶಾದಲ್ಲಿ ನಡೆದ ದುರಂತದ ಬಗ್ಗೆ ಕೇಳಿದ ನನ್ನ ಹೃದಯ ಒಡೆದುಹೋಯಿತು. ಅಪಘಾತದಲ್ಲಿ ಗಾಯಗೊಂಡವರಿಗೆ ನನ್ನ ಸಂತಾಪಗಳು. ನಾವೆಲ್ಲರೂ ಅವರ ಕುಟುಂಬಗಳನ್ನು ಬೆಂಬಲಿಸಲು ಬಯಸುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ. ಸೋನುಸೂದ್ ಟ್ವೀಟ್ ಇದೀಗ ವೈರಲ್ ಆಗಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!