ಒಡಿಶಾ ರೈಲು ದುರಂತ: ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಜೋ ಬಿಡೆನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

288 ಪ್ರಯಾಣಿಕರನ್ನು ಬಲಿತೆಗೆದುಕೊಂಡ ಮತ್ತು 1,000 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭೀಕರ ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭಾನುವಾರ ಸಾಂತ್ವನ ಹೇಳಿದ್ದಾರೆ. ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಮಾರಣಾಂತಿಕ ರೈಲು ಅಪಘಾತದ ದುರಂತ ಸುದ್ದಿಯಿಂದ ಇಬ್ಬರೂ ಎದೆಗುಂದಿದ್ದಾರೆ ಎಂದು ಹೇಳಿದರು.

ಶ್ವೇತಭವನದ ಅಧಿಕೃತ ಹೇಳಿಕೆಯ ಪ್ರಕಾರ, “ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಮತ್ತು ಈ ಭಯಾನಕ ಘಟನೆಯಲ್ಲಿ ಗಾಯಗೊಂಡ ಅನೇಕರಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ ಎಂದು  ಪ್ರಾರ್ಥಿಸುತ್ತೇವೆ” ಎಂದು ಬಿಡೆನ್ ಹೇಳಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವು ನಮ್ಮ ಎರಡು ರಾಷ್ಟ್ರಗಳನ್ನು ಮತ್ತೆ ಒಂದುಗೂಡಿಸುವ ಕುಟುಂಬ ಮತ್ತು ಸಂಸ್ಕೃತಿಯ ಸಂಬಂಧಗಳಲ್ಲಿ ಬೇರೂರಿರುವ ಆಳವಾದ ಬಂಧಗಳನ್ನು ಹಂಚಿಕೊಳ್ಳುತ್ತದೆ – ಮತ್ತು ಅಮೆರಿಕಾದಾದ್ಯಂತ ಜನರು ಭಾರತದಲ್ಲಿ ನಡೆದ ದುರ್ಘಟನೆಗೆ ಶೋಕಿಸುತ್ತಾರೆ” ಎಂದು ಹೇಳಿಕೆ ತಿಳಿಸಿದೆ.

ವಿನಾಶಕಾರಿ ರೈಲು ಅಪಘಾತದಲ್ಲಿ ಅಧಿಕೃತ ಸಾವಿನ ಸಂಖ್ಯೆಯು ಇಲ್ಲಿಯವರೆಗೆ 288 ರಷ್ಟಿದೆ, 1,000 ಹೆಚ್ಚು ಗಾಯಗೊಂಡಿದ್ದಾರೆ.
ಒಟ್ಟು 1,175 ಗಾಯಾಳುಗಳನ್ನು ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಮತ್ತು 793 ಮಂದಿ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ.

ದುರಂತದ ಪ್ರಾಥಮಿಕ ವರದಿಯ ಪ್ರಕಾರ ಅಪಘಾತವು ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್, ಗೂಡ್ಸ್‌ ರೈಲುಗಳ ನಡುವೆ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಶುಕ್ರವಾರ ಸಂಜೆ ನಡೆದ ಅಪಘಾತದಲ್ಲಿ ಈ ಎರಡು ರೈಲುಗಳ 17 ಬೋಗಿಗಳು ಹಳಿತಪ್ಪಿ ತೀವ್ರವಾಗಿ ಹಾನಿಗೀಡಾಗಿವೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!