Tuesday, June 28, 2022

Latest Posts

ಶೀಘ್ರದಲ್ಲೇ ಮತಾಂತರ ನಿಷೇಧ ಕಾಯಿದೆ ಜಾರಿಗೆ ಸುಗ್ರೀವಾಜ್ಞೆ: ಸಚಿವ ಕೋಟ

ಹೊಸದಿಗಂತ ವರದಿ, ಮೈಸೂರು:

ಶೀಘ್ರದಲ್ಲೇ ಮತಾಂತರ ನಿಷೇಧ ಕಾಯಿದೆಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಜಾರಿಗೆ ತರಲಾಗುವುದು ಎಂದು ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶುಕ್ರವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಭೆಯನ್ನು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಗೋ ಹತ್ಯೆ ನಿಷೇಧಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿ ವಿಧಾನ ಪರಿಷತ್‌ನಲ್ಲಿ ಅನುಮೋದನೆ ಪಡೆಯಲಾಯಿತು. ಆದರೆ, ಮತಾಂತರ ನಿಷೇಧಕ್ಕೆ ಅವಕಾಶ ಸಿಗದ ಕಾರಣ ಮುಂದಿನ ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಮುಂದೆ ಬಹುಮತದ ಆಧಾರದ ಮೇಲೆ ಮಸೂದೆಗೆ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದ್ದರೂ ಪಾಲನೆ ಮಾಡಬೇಕಾದ ಕಾಂಗ್ರೆಸ್ ನಾಯಕರು ಭಿನ್ನ ನಡೆ ಅನುಸರಿಸುತ್ತಿದ್ದು, ದೇಶ ಒಂದು ಕಡೆಯಾದರೆ, ಕಾಂಗ್ರೆಸ್ ಮತ್ತೊಂದು ದಿಕ್ಕಿನತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನ್ಯಾಯಾಲಯವು ಕೊಟ್ಟ ತೀರ್ಪು ಗೌರವಿಸಬೇಕು.ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಿ. ಆದರೆ, ನ್ಯಾಯಾಲಯದ ತೀರ್ಪನ್ನು ಬದಿಗೊತ್ತಿ ನಾವು ಹೇಳಿದ್ದನ್ನು ಮಾಡಬೇಕು ಎನ್ನುತ್ತಾರೆ. ದೇಶ,ಪ್ರಪಂಚ ಒಂದು ಕಡೆಯ ಹಾದಿಯಲ್ಲಿ ಹೋದರೆ, ಕಾಂಗ್ರೆಸ್ ನಾಯಕರು ಅದಕ್ಕೆ ವ್ಯತಿರಿಕ್ತವಾಗಿ ಸಾಗುತ್ತಿದ್ದಾರೆ ಎಂದು ಕಿಡಿಕಾರಿದರು. ಮುಂದಿನ ದಿನಗಳಲ್ಲಿ ನಮ್ಮ ವೈಚಾರಿಕ ನಿಲುವುಗಳನ್ನು ಜನರ ಮುಂದೆ ಹೇಳಿಕೊಂಡು ಸಾಗಬೇಕು. ರಾಜಕೀಯ ಹಿನ್ನೆಡೆ ಅನುಭವಿಸ ಬದಲಿಗೆ ಜನಪರ ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯಲು ಯತ್ನಿಸಬೇಕು. ಮಂತ್ರಿ,ಸಿಎA ಸೇರಿದಂತೆ ಪ್ರತಿಯೊಬ್ಬರೂ ವೈಚಾರಿಕ ವಿಚಾರಗಳನ್ನು ಗಟ್ಟಿಗೊಳಿಸಬೇಕು. ನಮ್ಮ ಆಚಾರ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕು. ಸಾಲ ಮನ್ನಾ ಮಾಡಿ ಎನ್ನುವ ಕೂಗಿನ ಬದಲಿಗೆ ಪಿಎಂ ಸಮ್ಮಾನ್ ಕಿಸಾನ್ ಯೋಜನೆಯಿಂದ ವರ್ಷಕ್ಕೆ ಹತ್ತು ಸಾವಿರ ರೂ.ಗಳು ರೈತರ ಮನೆಬಾಗಿಲಿಗೆ ತಲುಪುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಬದಲಾವಣೆ, ಮೀನುಗಾರಿಕೆ ಯೋಜನೆ, ಹಿಂದುಳಿದ ವರ್ಗದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಅಧಿಕಾರಿಗಳ ಮಾನಸಿಕವಾಗಿ ಬದಲಾವಣೆ ಆಗಬೇಕು. ಕಚೇರಿಗೆ ಸೀಮಿತವಾಗದೆ ಕ್ಷೇತ್ರದಲ್ಲಿ ಇದ್ದು ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ಪ್ರತಿ?ಂAದು ವಿಚಾರಗಳ ಬಗ್ಗೆ ಕಣ್ಗಾವಲು ಇಡಬೇಕು ಎಂದು ಕಿವಿಮಾತು ಹೇಳಿದರು.ದಿನದಿಂದ ದಿನಕ್ಕೆ ಕಾರ್ಯಕರ್ತರ ಸಂಖ್ಯೆ ಜಾಸ್ತಿಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಸಮರ್ಥ ಭಾರತ ಸ್ವಾಭಿಮಾನಿ ಭಾರತ ನಿರ್ಮಾಣವಾಗಿದೆ. ಪ್ರಧಾನಮಂತ್ರಿ ಕಾರ್ಯಶೈಲಿಯಿಂದಾಗಿ ಕೋವಿಡ್ ಸವಾಲಿನ ನಡುವೆ ದೇಶ ಅಭಿವೃದ್ಧಿಯಾಗಿದೆ. ನಮ್ಮ ವಿರುದ್ಧ ಮಾತನಾಡುವವರು ದಿಗ್ಬçಮೆ ಹೊಂದುವ ರೀತಿ ಕೆಲಸ ಮಾಡಲಾಗಿದೆ. ಉಕ್ರೇನ್ ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಭಾರತಕ್ಕೆ ತರಲಾಗಿದೆ. ಪ್ರತಿಕ್ಷಣ ಜೀವ ಇರುತ್ತದೆ ಅನ್ನುವ ನಂಬಿಕೆ ಇರಲಿಲ್ಲ.ಆದರೆ ಭಾರತೀಯ ರಾದ ನಾವು ಸುರಕ್ಷಿತವಾಗಿ ತಲುಪಲಿದ್ದೇವೆ ಎನ್ನುವ ಆಶಾಭಾವನೆ ಇತ್ತು. ಬದಲಾದ ಭಾರತದ ಶಕ್ತಿ ತೋರಿಸುತ್ತದೆ. ಸಾಮಾನ್ಯ ಕಾರ್ಯಕರ್ತನಿಗೆ ಇದಕ್ಕಿಂತ ಹೆಮ್ಮೆ ವಿಚಾರ ಬೇರೆ ಏನಿಲ್ಲ ಎಂದರು. ಹಲವಾರು ಸಮಸ್ಯೆಗಳಿಗೆ ಪರಿಹಾರ. ಇಡೀ ದೇಶದಲ್ಲಿ ಭಾರತ ಒಂದಾಗುತ್ತಿದೆ. ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಕಡಿಮೆಯಾಗಿದೆ. 360 ಕಲಂ ರದ್ದು ಮಾಡಿದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದಾರೆ. ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಸಂದಿಗ್ಧ ಪರಿಸ್ಥಿತಿಯನ್ನು ನಿವಾರಣೆ ಮಾಡಿದ ಮೋದಿಯ ಸಂಕಲ್ಪದಿAದಾಗಿ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಈ ವೇಳೆ ರಾಜ್ಯ ಉಪಾಧ್ಯಕ್ಷ ಎಂ.ರಾಜೇAದ್ರ,ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ ಕುಮಾರ್ ಗೌಡ, ನಗರಪಾಲಿಕೆ ನಾಮ ನಿರ್ದೇಶಿತರಾದ ಆಶಾ ನಾಗಭೂಷಣ್ ಸಿಂಗ್, ಕೆ.ಜೆ.ರಮೇಶ್, ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು,ಗ್ರಾಮಾAತರ ಜಿಲ್ಲಾ ಅಧ್ಯಕ್ಷ ಪರಶುರಾಮಪ್ಪ, ಎಸ್. ಟಿ. ಮೋರ್ಚಾ ಅಧ್ಯಕ್ಷ ಲಕ್ಷತ್ಮಣ್ ,ಪ್ರಧಾನ ಕಾರ್ಯದರ್ಶಿ ಮಣಿರತ್ನಂ ಸಭೆಯಲ್ಲಿ ಹಾಜರಿದ್ದರು.
[5:52 pm, 08/04/2022] M A1: ಸಾಧಕ, ಭಾದಕಗಳನ್ನು ಚರ್ಚಿಸಿದ ಬಳಿಕ ಡಿಸಿಸಿ ಬ್ಯಾಂಕ್‌ಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲು ಕ್ರಮ; ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು; ರೈತರಿಗೆ ಶೇ 1ರಷ್ಟು ಉಳಿತಾಯ ಆಗುತ್ತದೆ ಎಂಬ ಆಲೋಚನೆಯಿಂದ ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ಗೆ ವಿಲೀನ ಮಾಡುವ ಚಿಂತನೆ ಮಾಡಲಾಗುತ್ತಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಡಿಸಿಸಿ ಬ್ಯಾಂಕ್ ಗಳನ್ನು ಅಪೆಕ್ಸ್ ಬ್ಯಾಂಕ್ ಗೆ ವಿಲೀನ ಮಾಡಲಾಗಿದೆ. ನಮ್ಮ ರಾಜ್ಯದ ಅಧಿಕಾರಿಗಳು ಅಲ್ಲಿಗೆ ಪ್ರವಾಸಕ್ಕೆ ತೆರಳಿ, ವರದಿ ಸಿದ್ಧಪಡಿಸಲಿದ್ದಾರೆ. ನಂತರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ಚಾಮುAಡಿ ಬೆಟ್ಟಕ್ಕೆ ರೋಪ್ ವೇ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಮೈಸೂರಿನ ಅಭಿವೃದ್ಧಿ ಬಗ್ಗೆ ಗಮನಹರಿಸಲಾಗಿದೆ. ಫಿಲ್ಮ್ ಸಿಟಿ ನಿರ್ಮಾಣ, ಏರ್ ಪೋರ್ಟ್, ಕೆಆರ್ ಆಸ್ಪತ್ರೆಗೆ ಹಣ ಬಿಡು…
[5:53 pm, 08/04/2022] M A1: ಮುಡಾ ಅಧಿಕಾರಿಗಳಿಂದ ಅನಧಿಕೃತ ಕಟ್ಟಡ, ಒತ್ತುವರಿ ತೆರುವು
ಮೈಸೂರು: ಮುಡಾಗೆ ಸೇರಿದ ಜಾಗದಲ್ಲಿ ಅನಧಿಕೃತ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಿಗಳು ಶುಕ್ರವಾರ ಕಾರ್ಯಚರಣೆ ನಡೆಸುವ ಮೂಲಕ ನೆಲಸಮಗೊಳಿಸಿ, ಕೋಟ್ಯಂತರ ರೂ.ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ರಾಮಕೃಷ್ಣನಗರ ಸಬ್ ರಿಜಿಸ್ಟಾçರ್ ಕಚೇರಿ ಬಳಿ 50ಕ್ಕೂ ಹೆಚ್ಚು ಪತ್ರಬರಹಗಾರರ ಅನಧಿಕೃತ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಮಾಹಿತಿ ಮೇಲೆ ಪೊಲೀಸರ ಬಂದೋಬಸ್ತ್ನಲ್ಲಿ ಜೆಸಿಬಿ ಯಂತ್ರಗಳೊAದಿಗೆ ಸ್ಥಳಕ್ಕೆ ಆಗಮಿಸಿದ ಮುಡಾ ಅಧಿಕಾರಿಗಳು ಕಾರ್ಯಚರಣೆ ನಡೆಸಿ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಮೈಸೂರು ನಗರ ದಟ್ಟಗಳ್ಳಿ ಗ್ರಾಮದ ಸರ್ವೇ ನಂಬರ್ 26, 1 ಬಿ ನಲ್ಲಿ ಒತ್ತುವರಿಯಾಗಿದ್ದ 1ಎಕರೆ 27 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವಶಕ್ಕೆ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss