ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ (Soundarya Jagadeesh) ಇಂದು (ಏ.14) ತಮ್ಮ ನಿವಾಸದಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್ ಗಣ್ಯರು ಜಗದೀಶ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ.
ನಟ ದರ್ಶನ್ (Darshan) ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಬಂದು ಅಂತಿಮ ದರುಶನ ಪಡೆದಿದ್ದಾರೆ.
ಸೋಮವಾರ (ಏಪ್ರಿಲ್ 15) ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸೌಂದರ್ಯ ಜಗದೀಶ್ ಅವರ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ.
ಉದ್ಯಮಿ ಆಗಿದ್ದ ಸೌಂದರ್ಯ ಜಗದೀಶ್ ಅವರು ನಂತರ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಚಿತ್ರರಂಗದ ಹಲವರ ಜೊತೆ ಅವರು ಒಡನಾಟ ಹೊಂದಿದ್ದರು. ಇಂದು ಶ್ರೀಮುರಳಿ, ದರ್ಶನ್, ಉಪೇಂದ್ರ, ಗುರುಕಿರಣ್, ತರುಣ್ ಸುಧೀರ್, ಸಾರಾ ಗೋವಿಂದು, ಕೆ. ಮಂಜು ಮುಂತಾದವರು ಬಂದು ಸೌಂದರ್ಯ ಜಗದೀಶ್ ಅವರ ಅಂತಿಮ ದರುಶನ ಪಡೆದಿದ್ದಾರೆ.