August 24, 2026
Monday, August 24, 2026
spot_img

Soup | ಫಿಟ್‌ನೆಸ್ ಪ್ರಿಯರಿಗೆ ಬೆಸ್ಟ್ ಚಾಯ್ಸ್: ಕೊಬ್ಬು ಕರಗಿಸುವ ಹೆಲ್ತಿ ಮಶ್ರೂಮ್ ಸೂಪ್ ಇಲ್ಲಿದೆ

ಆರೋಗ್ಯಕರ ಜೀವನಕ್ಕೆ ಬಿಸಿಬಿಸಿಯಾದ ಮಶ್ರೂಮ್ ಸೂಪ್! ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಈ ಅಣಬೆ ಸೂಪ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಆಯ್ಕೆಯಾಗಿದೆ. ಕೇವಲ 15 ನಿಮಿಷಗಳಲ್ಲಿ ಇದನ್ನು ಮಾಡಬಹುದು.

ಬೇಕಾಗುವ ಸಾಮಗ್ರಿಗಳು

ಅಣಬೆ

ಬೆಣ್ಣೆ ಅಥವಾ ಎಣ್ಣೆ

ಬೆಳ್ಳುಳ್ಳಿ

ಈರುಳ್ಳಿ

ಮೆಣಸಿನ ಪುಡಿ

ಕಾರ್ನ್‌ಪ್ಲೋರ್

ಹಾಲು ಅಥವಾ ಫ್ರೆಶ್ ಕ್ರೀಮ್

ಕೊತ್ತಂಬರಿ ಸೊಪ್ಪು

ಉಪ್ಪು

ಮಾಡುವ ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ಬೆಣ್ಣೆ ಹಾಕಿ ಕರಗಿಸಿ. ನಂತರ ಅದಕ್ಕೆ ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಂಡು, ಹೆಚ್ಚಿದ ಅಣಬೆಗಳನ್ನು ಸೇರಿಸಿ 4-5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ಅಣಬೆ ನೀರು ಬಿಟ್ಟುಕೊಂಡು ಮೆತ್ತಗಾಗುವವರೆಗೆ ಹುರಿಯಬೇಕು. ಇದಕ್ಕೆ 2 ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಕುದಿಸಿ. ಸೂಪ್ ಹೋಟೆಲ್‌ನಂತೆ ದಪ್ಪಗಾಗಲು, ಕಾರ್ನ್‌ಪ್ಲೋರ್ ಹಾಕಿ 2ನಿಮಿಷ ಕುದಿಸಿ. ಈಗ ಉರಿಯನ್ನು ಕಡಿಮೆ ಮಾಡಿ, ಹಾಲು ಅಥವಾ ಫ್ರೆಶ್ ಕ್ರೀಮ್ ಸೇರಿಸಿ ಕೈಯಾಡಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ, ಕ್ರೀಮಿಯಾದ ಅಣಬೆ ಸೂಪ್ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !