September 8, 2026
Tuesday, September 8, 2026
spot_img

Soup | ಆರೋಗ್ಯಕ್ಕೆ ಬೆಸ್ಟ್! ಪೌಷ್ಟಿಕ ನುಗ್ಗೆ ಸೊಪ್ಪಿನ ಸೂಪ್ ಮಾಡುವ ಸುಲಭ ವಿಧಾನ ಇಲ್ಲಿದೆ

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ A, C, ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಈ ಸೂಪ್ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು ಹಾಗೂ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಬೇಕಾಗುವ ಪದಾರ್ಥಗಳು

ನುಗ್ಗೆ ಸೊಪ್ಪು – 1 ಕಪ್
ಈರುಳ್ಳಿ – 1
ಬೆಳ್ಳುಳ್ಳಿ – 3 ಎಸಳು
ಜೀರಿಗೆ – ½ ಚಮಚ
ಕಾಳುಮೆಣಸಿನ ಪುಡಿ – ½ ಚಮಚ
ತುಪ್ಪ ಅಥವಾ ಎಣ್ಣೆ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – 2 ಕಪ್

ಮಾಡುವ ವಿಧಾನ

ನುಗ್ಗೆ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ. ಬಳಿಕ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ಈಗ ನುಗ್ಗೆ ಸೊಪ್ಪು ಸೇರಿಸಿ 2–3 ನಿಮಿಷ ಬಾಡಿಸಿ. ನಂತರ 2 ಕಪ್ ನೀರು ಹಾಗೂ ಉಪ್ಪು ಸೇರಿಸಿ 8–10 ನಿಮಿಷ ಚೆನ್ನಾಗಿ ಕುದಿಸಿ. ಸೊಪ್ಪು ಚೆನ್ನಾಗಿ ಬೆಂದ ಬಳಿಕ ತಣ್ಣಗಾಗಿಸಿ ರುಬ್ಬಿ ಮತ್ತೆ ಬಿಸಿ ಮಾಡಿ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಸೇರಿಸಿ ಬಿಸಿ ಬಿಸಿಯಾಗಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !