ತುರ್ತು ಮಿಲಿಟರಿ ಆಡಳಿತ ಆದೇಶ ಹಿಂಪಡೆದ ದಕ್ಷಿಣ ಕೊರಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಪಕ್ಷಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿವೆ ಎಂದು ಆರೋಪಿಸಿ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ದೇಶದಲ್ಲಿ ಹೊರಡಿಸಿದ್ದ ತುರ್ತು ಮಿಲಿಟರಿ ಆಡಳಿತವನ್ನು ಕೆಲವೇ ಗಂಟೆಗಳಲ್ಲಿ ಹಿಂಪಡೆದಿದ್ದಾರೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಸುಕ್-ಯೋಲ್ ಮಂಗಳವಾರ ರಾತ್ರಿ ಆಘಾತಕಾರಿ ಘೋಷಣೆಯನ್ನು ಮಾಡಿದ್ದರು. ದೇಶದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಮಿಲಿಟರಿ ಆಡಳಿತವನ್ನು ಘೋಷಿಸಲಾಗಿತ್ತು. ಅಧ್ಯಕ್ಷ ಯುನ್ ಸುಕ್-ಯೋಲ್ ಅವರ ಘೋಷಣೆಯ ನಂತರ, ದಕ್ಷಿಣ ಕೊರಿಯಾದ ಶಾಸಕರು ಸಮರ ಕಾನೂನನ್ನು ಬಲವಾಗಿ ವಿರೋಧಿಸಿದರು.

ಅಧ್ಯಕ್ಷರ ನಿರ್ಧಾರವನ್ನು ಖಂಡಿಸಲು ರಾಷ್ಟ್ರೀಯ ಅಸೆಂಬ್ಲಿಯ ಮಧ್ಯರಾತ್ರಿಯ ಅಧಿವೇಶನದಲ್ಲಿ ಅವರು ಸಮರ ಕಾನೂನನ್ನು ಹೇರುವುದರ ವಿರುದ್ಧ ಸರ್ವಾನುಮತದಿಂದ ಮತ ಚಲಾಯಿಸಿದರು. ಸೇನಾಡಳಿತದ ಮೂಲಕ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವನ್ನು ಮರು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳಿಂದ ಎದುರಾಗಿರುವ ಬೆದರಿಕೆಯಿಂದ ಸ್ವತಂತ್ರ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ದೇಶ ವಿರೋಧಿ ಶಕ್ತಿಗಳನ್ನು ನಿವಾರಿಸಲು ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿತ್ತು.

ಜನರ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಇದು ಅನಿವಾರ್ಯ ಕ್ರಮವಾಗಿದೆ. ರಾಷ್ಟ್ರೀಯ ಸಂಸತ್ತು ಕೂಡಾ ಮಾದಕ ವಸ್ತು ಅಪರಾಧ ತಡೆಗಟ್ಟಲು, ನಾಗರಿಕರ ಸುರಕ್ಷತೆ ಕ್ರಮಗಳಿಗೆ ನಿಗದಿಯಾಗಿದ್ದ ಬಜೆಟ್ ಅನುದಾನವನ್ನು ಕಡಿತಗೊಳಿಸಲಾಗಿತ್ತು.

ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿತ್ತು. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿತ್ತು. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆರೇ ಆರು ಗಂಟೆಗಳಲ್ಲಿ ನಿರ್ಣಯ ಬದಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!