ಇಂಧನ ತುಂಬಿಸಿಕೊಳ್ಳಲು ಭಾರತಕ್ಕೆ ಬಂದ ದಕ್ಷಿಣ ಕೊರಿಯಾ ಯುದ್ಧ ವಿಮಾನಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ನೌಕಾಪಡೆಯ ಹಡಗು ದುರಸ್ತಿ ಸೇವೆಗಾಗಿ ಭಾರತಕ್ಕೆ ಆಗಮಿಸಿರುವ ಬೆನ್ನಲ್ಲೇ ದಕ್ಷಿಣ ಕೊರಿಯಾದ 10 ಯುದ್ಧ ವಿಮಾನಗಳು ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ಅಹ್ಮದಾಬಾದ್ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿವೆ.

ಭಾರತ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಆತ್ಮನಿರ್ಭರತೆ ಸಾಧಿಸುವತ್ತ ಆದ್ಯತೆ ನೀಡಿರುತ್ತಿರುವುದರ ಜತೆಗೆ ಅಮೆರಿಕ ಸೇರಿ ಇತರೆ ದೇಶಗಳ ಸಶಸ್ತ್ರ ಪಡೆಗಳ ಯುದ್ಧ ವಿಮಾನ ಹಾಗೂ ಹಡಗುಗಳಿಗೆ ದುರಸ್ತಿ ಸೇವೆಗಳನ್ನು ಒದಗಿಸುತ್ತಿದೆ. ಆ ಮೂಲಕ ದೇಶ ಜಾಗತಿಕ ಮಟ್ಟದಲ್ಲಿ ಸಶಸ್ತ್ರ ಸೇವೆಗಳ ಪೂರೈಕೆದಾರ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತಿದೆ.

ದಕ್ಷಿಣ ಕೊರಿಯಾದ ವಾಯುಪಡೆಗೆ ಸೇರಿದ 10 ಯುದ್ಧ ವಿಮಾನಗಳು ಅಹ್ಮದಾಬಾದ್‌ನಲ್ಲಿನ ವಿಮಾನ ನಿಲ್ದಾಣದಲ್ಲಿ ಇಂಧನವನ್ನು ತುಂಬಿಸಿಕೊಂಡು ಹೋಗಿವೆ. ತಾಂತ್ರಿಕ ಕಾರಣಗಳಿಂದಾಗಿ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದವು. ಬಳಿಕ ನಾಗ್ಪುರದತ್ತ ಹಾರಾಟ ನಡೆಸಿವೆ ಎಂದು ಭಾರತೀಯ ವಾಯು ಪಡೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!