ಲೋಕಲ್ ಉತ್ಪನ್ನಗಳ ಮಾರಾಟಕ್ಕೆ ನೈಋತ್ಯ ರೈಲ್ವೆ ಸೃಷ್ಟಿಸಿದೆ ಹೊಸ ವೇದಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಬ್ರಹ್ಮಣ್ಯ: ಮೈಸೂರು ನಿಲ್ದಾಣದಲ್ಲಿ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಗೆ ಪ್ರಯಾಣಿಕ ರಿಂದ ಸಿಕ್ಕಿದ ಭರ್ಜರಿ ಬೆಂಬಲ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಇನ್ನಷ್ಟು ಹುರುಪು ನೀಡಿದ್ದು, ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲ್ವೆ ನಿಲ್ದಾಣ ಸೇರಿದಂತೆ 67 ರೈಲ್ವೆ ನಿಲ್ದಾಣದಲ್ಲಿ ಈ ಸೇವೆ ವಿಸ್ತರಿಸಲು ಈಗ ಇಲಾಖೆ ಗಂಭೀರವಾದ ಚಿಂತನೆ ನಡೆಸಿದೆ.
ಏನಿರುತ್ತವೆ ಈ ಮಳಿಗೆಯಲ್ಲಿ?
ಱಒಂದು ನಿಲ್ದಾಣ ಒಂದು ಉತ್ಪನ್ನೞ ಯೋಜನೆ ರೈಲು ನಿಲ್ದಾಣಗಳಲ್ಲಿ ಕರಕುಶಲ ವಸ್ತುಗಳು, ಕಲಾಕೃತಿಗಳು, ಜವಳಿ ಮತ್ತು ಕೈ ಮಗ್ಗಗಳ ನೇಯ್ದ ಬಟ್ಟೆ, ಸಾಂಪ್ರದಾಯಿಕ ಉಡುಪುಗಳು, ಸ್ಥಳೀಯ ಕೃಷಿ ಉತ್ಪನ್ನಗಳು, ಸಂಸ್ಕರಿಸಿದ, ಅರೆ ಸಂಸ್ಕರಿಸಿದ ಆಹಾರಗಳು, ಮಸಾಲೆಗಳು ಮತ್ತು ಅರಣ್ಯ ಉತ್ಪನ್ನಗಳು, ಶ್ರೀಗಂಧದ ಆಧಾರಿತ ಉತ್ಪನ್ನಗಳು, ಕಾಫಿ ಮತ್ತು ಏಲಕ್ಕಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಲ್ಲಿ ಸ್ಥಳ ಗುರುತಿಸಲಾಗಿದೆ.
ಆಸಕ್ತರು ರೈಲ್ವೆ ಇಲಾಖೆ ಸಂಪರ್ಕಿಸಬಹುದು.
ಸ್ಥಳೀಯ ಉತ್ಪನ್ನ ತಯಾರಿಸುವ ಏಜೆನ್ಸಿಗಳು, ಕುಶಲಕರ್ಮಿಗಳು, ನೇಕಾರರು, ಕರಕುಶಲಿ ಗಳು, ಸ್ವ ಸಹಾಯ ಗುಂಪುಗಳು, ಬುಡಕಟ್ಟು ಸಹಕಾರ ಸಂಘಗಳು, ಸಮಾಜದ ಕಟ್ಟಕಡೆಯ  ದುರ್ಬಲ ವರ್ಗಗಳಿಂದ ತಮ್ಮ ಉತ್ಪನ್ನ ಗಳನ್ನು ವಿಭಾಗದಾದ್ಯಂತದ ರೈಲ್ವೆ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಅರ್ಜಿಗಳನ್ನು ಆಹ್ವಾನಿಸಲಿದೆ. ಆಸಕ್ತರು ಮೈಸೂರಿನಲ್ಲಿ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಭೇಟಿ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 8884303801, 7977509065 ಮತ್ತು 9731159568 ಸಂಪರ್ಕಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!