172 ರೌಡಿಶೀಟರ್ ಗಳ ಹೆಡಿಮುರಿ ಕಟ್ಟಿ, ಖಡಕ್ ಎಚ್ಚರಿಕೆ ನೀಡಿದ ಎಸ್ಪಿ ಲಕ್ಷ್ಮಣ ನಿಂಬರಗಿ

ಹೊಸದಿಗಂತ ವಿಜಯಪುರ:

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಪ್ರಮುಖ ರೌಡಿ ಶೀಟರ್ ಗಳ ಹೆಡಿಮುರಿ ಕಟ್ಟಿರುವ ಪೊಲೀಸ್ ಇಲಾಖೆ, ಯಾವುದೇ ರೀತಿ ಬಾಲ ಬಿಚ್ಚದಂತೆ ಖಡಕ್ ಎಚ್ಚರಿಕೆ ಸಂದೇಶ ನೀಡಿದೆ.

ಜಿಲ್ಲಾದ್ಯಂತ ಅಕ್ರಮ ಚಟುವಟಿಕೆಯಲ್ಲಿರುವ ಪ್ರಮುಖ 172 ಜನ ರೌಡಿ ಶೀಟರ್‌ಗಳ ತಪಾಸಣೆ ಕೈಕೊಂಡು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ದಕ್ಷ ಹಾಗೂ ಖಡಕ್ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆದರಿಸುವ, ಭಯಪಡಿಸುವ ಹಾಗೂ ಚಟುವಟಿಕೆಯಲ್ಲಿರುವ ಪ್ರಮುಖ 172 ಜನ ರೌಡಿ ಶೀಟರ್‌ಗಳ ತಪಾಸಣೆ ಕಾರ್ಯಾಚರಣೆ ಕೈಕೊಳ್ಳಲಾಗಿದೆ.

ಅದರಲ್ಲಿ ಬೇರೆಯವರ ಹೆಸರಿನಲ್ಲಿದ್ದ ವಾಹನಗಳನ್ನು, ಸಾಲ ಕೊಟ್ಟ ಹಣಕ್ಕಾಗಿ, ಅನಧೀಕೃತವಾಗಿ ಇಟ್ಟುಕೊಂಡ 6 ಜನ, ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ಹೆಸರಿನಲ್ಲಿದ್ದ ಚೆಕ್, ಬಾಂಡ್ ಪೇಪರ್ ಹಾಗೂ ಇತರೆ ದಾಖಲಾತಿಗಳನ್ನು ಹೆದರಿಸಿ ಇಟ್ಟುಕೊಂಡಿದ್ದ 6 ಜನ ಸೇರಿದಂತೆ ಇನ್ನುಳಿದ ಜನರ ಮೇಲೆ ಒಟ್ಟು 21 ಪಿಎಆರ್ ದಾಖಲಿಸಲಾಗಿದೆ. ಅಲ್ಲದೇ 2 ರೌಡಿ ಶೀಟರ್‌ಗಳು ಈ ಹಿಂದೆ ಎಫ್‌ಐಆರ್ ದಾಖಲಾಗಿ, ನ್ಯಾಯಾಲಯದಿಂದ ವಾರಂಟ್ ಹೊರಡಿಸಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 4 ಜನ ರೌಡಿ ಶೀಟರ್ ಅಕ್ರಮ, ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದವರ ಮೇಲೂ ಶಸ್ತ್ರಾಸ್ತ್ರ ಕಾಯ್ದೆಯಡಿ, 2 ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!