100 ಕಿಸಾನ್‌ ಡ್ರೋನ್‌ ಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ಏನಿದರ ವಿಶೇಷತೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಿನ್ನೆ ಪ್ರಧಾನಿ ಮೋದಿ ಭಾರತದ ವಿವಿಧ ನಗರಗಳಲ್ಲಿ 100 ಕಿಸಾನ್‌ ಡ್ರೋನ್‌ ಗಳಿಗೆ ಚಾಲನೆ ನೀಡಿದ್ದಾರೆ. ಕೃಷಿ ಭೂಮಿಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಇರುವ ಈ ಡ್ರೋನ್‌ ಗಳು ರೈತರ ಕೆಲವನ್ನು ಸುಲಭಗೊಳಿಸಲಿದೆ.

ಏನಿದು ಕಿಸಾನ್‌ ಡ್ರೋನ್?

  • ಈ ಡ್ರೋನ್‌ ಮೂಲಕ ಭೂ ದಾಖಲೀಕರಣ ಮಾಡಬಹುದು.
  • ಇದರಿಂದ ಬೆಳೆಗಳಿಗೆ ಕೀಟನಾಶಕ ಸಿಂಪಡಿಸಬಹುದು.
  • ವಿವಿಧ ಪ್ರದೇಶಗಳಿಗೆ ಕೀಟನಾಶಕಗಳನ್ನು ಸಾಗಿಸಬಹುದು.
  • ಬೆಳೆ ಮೌಲ್ಯಮಾಪನ, ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು, ಬೆಳೆಗಳಿಗೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಿಸಬಹುದು.
  • 10 ಕೆ.ಜಿ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಡ್ರೋನ್‌ ಎಕರೆಗೆ 350-450 ರೂ. ವೆಚ್ಚವಾಗಲಿದೆ.
  • ಹೆಚ್ಚು ಬ್ಯಾಟರಿ ಇರುವ ಡ್ರೋನ್‌ ಗಳು ದಿನಕ್ಕೆ 6 ಗಂಟೆಗಳ ಕಾಲ ಬಳಸಬಹುದು.
  • ಅಂದರೆ ಸುಮಾರು 30 ಎಕರೆ ಪ್ರದೇಶಕ್ಕೆ ಕೀಟನಾಶಕಗಳನ್ನು ಸಿಂಪಡಿಸಬಹುದು.
  • ಇದರಿಂದ ರೈತರು ತಮ್ಮ ಬೆಳಗಳನ್ನು ಮಾರುಕಟ್ಟೆಗೆ ಕಳುಹಿಸಬಹುದು.
  • ಇದು ಸ್ವದೇಶಿ ಉತ್ಪನ್ನವಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಂತರ ಡ್ರೋನ್‌ ಗಳು ಲಭ್ಯವಿರಲಿವೆ.

ಈ ಕಿಸಾನ್​ ಡ್ರೋನ್​​ಗಳಿಂದಾಗಿ ಕೃಷಿ​ ವಲಯದ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸೃಷ್ಟಿಯಾಗಿದ್ದು, ಅಪಾರ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!