September 14, 2026
Monday, September 14, 2026
spot_img

ಪಲ್ಯ, ಗ್ರೇವಿ & More 72 | ಈ ಸ್ಪೆಷಲ್ ಪೇರಳೆ ಹಣ್ಣಿನ ಚಟ್ನಿ ಇದ್ರೆ ದೋಸೆ, ಚಪಾತಿ, ಬ್ರೆಡ್ ಯಾವ್ದು ಉಳಿಯಲ್ಲ

ದೋಸೆ, ಚಪಾತಿ, ಪರೋಟಾ ಅಥವಾ ಬ್ರೆಡ್ ಜೊತೆ ಸವಿಯಲು ಹೊಸ ರುಚಿ ಬೇಕೆಂದರೆ ಪೇರಳೆ ಹಣ್ಣಿನ ಚಟ್ನಿ ಒಳ್ಳೆಯ ಆಯ್ಕೆ. ಇದನ್ನು ಡಿಪ್ಪಿಂಗ್ ಸಾಸ್ ಅಥವಾ ಸೈಡ್ ಡಿಶ್ ಆಗಿಯೂ ಬಳಸಬಹುದು.ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಚಟ್ನಿ ಫ್ರಿಜ್‌ನಲ್ಲಿ ಕೆಲವು ದಿನ ಸಂಗ್ರಹಿಸಿಯೂ ಬಳಸಬಹುದು.

ಬೇಕಾಗುವ ಪದಾರ್ಥಗಳು:

ಪೇರಳೆ ಹಣ್ಣು – 4 ರಿಂದ 5
ಉಪ್ಪು – ಅರ್ಧ ಟೀಸ್ಪೂನ್
ಸಕ್ಕರೆ – 1 ಕಪ್
ತುರಿದ ಶುಂಠಿ – 1 ಟೀಸ್ಪೂನ್
ಬೆಳ್ಳುಳ್ಳಿ – 4 ಎಸಳು (ಸಣ್ಣದಾಗಿ ಹೆಚ್ಚಿದ್ದು)
ಜೀರಿಗೆ – ಅರ್ಧ ಟೀಸ್ಪೂನ್
ಚಿಲ್ಲಿ ಫ್ಲೇಕ್ಸ್ – 1 ಟೀಸ್ಪೂನ್
ಅರಿಶಿನ ಪುಡಿ – ಕಾಲು ಟೀಸ್ಪೂನ್
ಮೆಂತ್ಯ – ಕಾಲು ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಹಿಂಗ್ – ಚಿಟಿಕೆ
ಎಣ್ಣೆ – 1 ಟೀಸ್ಪೂನ್
ವಿನೆಗರ್ – 2 ಟೇಬಲ್ ಸ್ಪೂನ್
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ನೀರು – ಕಾಲು ಕಪ್

ಮಾಡುವ ವಿಧಾನ:

ಮೊದಲು ಪೇರಳೆ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಬೀಜಗಳನ್ನು ಬೇರ್ಪಡಿಸಿ ಕತ್ತರಿಸಿಕೊಳ್ಳಿ.

ಒಂದು ಪಾತ್ರೆಗೆ ನೀರು ಹಾಕಿ ಪೇರಳೆ ತುಂಡುಗಳನ್ನು ಮೃದುವಾಗುವವರೆಗೆ ಬೇಯಿಸಿ. ಬಳಿಕ ಮ್ಯಾಶ್ ಮಾಡಿಕೊಳ್ಳಿ.

ಈಗ ಒಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ ಮತ್ತು ಮೆಂತ್ಯ ಸ್ವಲ್ಪ ಹುರಿದು ತಣ್ಣಗಾದ ಮೇಲೆ ಒರಟಾಗಿ ಪುಡಿ ಮಾಡಿಕೊಳ್ಳಿ.

ಅದೇ ಬಾಣಲೆಯಲ್ಲಿ ಎಣ್ಣೆ ಹಾಕಿ ಚಿಲ್ಲಿ ಫ್ಲೇಕ್ಸ್, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ ಹುರಿಯಿರಿ. ಹಸಿ ವಾಸನೆ ಹೋದ ಬಳಿಕ ಬೇಯಿಸಿದ ಪೇರಳೆ ಮಿಶ್ರಣ ಸೇರಿಸಿ. ನಂತರ ಅದಕ್ಕೆ ಮಸಾಲೆ ಪುಡಿ, ಸಕ್ಕರೆ, ಉಪ್ಪು, ಅರಿಶಿನ, ಹಿಂಗ್ ಮತ್ತು ವಿನೆಗರ್ ಸೇರಿಸಿ ನಿಧಾನ ಉರಿಯಲ್ಲಿ ಚೆನ್ನಾಗಿ ಕುದಿಸಿ. ಚಟ್ನಿ ದಪ್ಪಗಾಗುವವರೆಗೆ ಬೇಯಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !