October 12, 2026
Monday, October 12, 2026
spot_img

ಪ್ರಧಾನಿ ಮೋದಿಗಾಗಿ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹೊಸದಿಗಂತ ವರದಿ ಗದಗ:

ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ದೀರ್ಘಾವಧಿ ಪ್ರಧಾನಿಯಾಗಿ 4,399 ಪೂರೈಸಿದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಐತಿಹಾಸಿಕ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಸದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಾಥ್ ನೀಡಿದರು.

ನಂತರ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ದೀರ್ಘಾವಧಿ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಬಣ್ಣಿಸಿದರು.

ಆರ್ ಎಸ್ ಎಸ್ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ಆರ್ ಎಸ್ ಎಸ್ ಗೆ ಸುದೀರ್ಘವಾದ ಇತಿಹಾಸ ಇದೆ. ಕಾಂಗ್ರೆಸ್ ವಿದೇಶಿಯರಿಂದ ಸ್ಥಾಪನೆ ಆಗಿರೋದು. ಆರ್ ಎಸ್ ಎಸ್ ಸ್ವದೇಶದಿಂದ ಸ್ಥಾಪನೆಯಾಗಿರೋದು. ಹೀಗಾಗಿ ಇದಕ್ಕೆ ಯಾವ ಮನ್ನಣೆ ಎನ್ನುವ ಪ್ರಶ್ನೆ ಬರೋದಿಲ್ಲ ಎಂದು ಹೇಳಿದರು.

ರಿಜಿಸ್ಟರ್ ಹಾಗೂ ಅನ್ ರಿಜಿಸ್ಟರ್ ಸಂಸ್ಥೆಗಳು ಸಾಕಷ್ಟು ಇವೆ. ಈ ದೇಶದ ಕಾನೂನಿನಲ್ಲಿ
ಸಾಕಷ್ಟು ಅವಕಾಶವಿದೆ. ಎಲ್ಲಕ್ಕಿಂತ ಹೆಚ್ಚು ಆರ್ ಎಸ್ ಎಸ್ ಜನಸೇವೆಯಲ್ಲಿ ಇಡೀ ಜಗತ್ತಿನಲ್ಲಿ ಶ್ರೇಷ್ಠವಾಗಿದೆ. ಆರ್ ಎಸ್ ಎಸ್
ಜಗತ್ತಿನಲ್ಲಿ ಅತೀ ದೊಡ್ಡ ಸಂಸ್ಥೆಯಾಗಿದೆ ಎಂದು ಹೇಳಿದರು.

ಕಾಲಕಾಲಕ್ಕೆ ಕೆಲವರು ಈ ರೀತಿ ಪ್ರಶ್ನೇ ಮಾಡುತ್ತಾರೆ. ಅದಕ್ಕೆ ಜಗ್ಗದ ಬಗ್ಗದೆ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ನಮಗೆ ರಾಜಕೀಯ ಮೌಲ್ಯಗಳ ಆರ್ ಎಸ್ ಎಸ್ ಪ್ರೇರಿತ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

Must Read