ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏರ್ಶೋಗಾಗಿ ತೆರಳಲು ಇಚ್ಚಿಸುವ ಜನರಿಗೆ ಬಿಎಂಟಿಸಿ ಸ್ಪೇಷಲ್ ಸರ್ವಿಸ್ ನೀಡುತ್ತಿದೆ. ನಗರದ ಪ್ರಮುಖ ಬಸ್ಸ್ಟ್ಯಾಂಡ್ಗಳಿಂದ ಏರ್ಶೋಗೆ ಡೈರೆಕ್ಟ್ ಬಸ್ ಸೇವೆ ನೀಡಲಾಗುತ್ತಿದೆ. ಜೊತೆಗೆ ಏರ್ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ.
ನಾಲ್ಕು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್ಶೋ ಟಿಕೆಟ್ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು.
ಬ್ರವರಿ 11 ರಿಂದ 14ರವರೆಗೂ ಫ್ರೀ ಬಸ್ ಸೇವೆ ಇದೆ. ಹೆಬ್ಬಾಳ ಕೋರಮಂಗಲ, ಮೆಜೆಸ್ಟಿಕ್, ಶಿವಾಜಿನಗರ, ಬನಶಂಖರಿ, ವಿಜಯನಗರ, ಕೆಂಗೇರಿ, ಒರಿಯಾನ್ ಮಾಲ್, ಎಲೆಕ್ಟ್ರಾನಿಕ್ ಸಿಟಿ, ಐಟಪಿಎಲ್ನಿಂದ ಏರ್ಶೋಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿಯಿಂದಲೇ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು. ಇದನ್ನು ಸದುಪಯೋಗಪಡಿಸಿಕೊಳ್ಳಲು ಬಿಎಂಟಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.