ಸಂಸತ್‌ ವಿಶೇಷ ಅಧಿವೇಶನ ಆರಂಭ, ಜಿ-20ಯಶಸ್ವಿಯಾಗಿದ್ದಕ್ಕೆ ಸ್ಪೀಕರ್‌ ಅಭಿನಂದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಳೆಯ ಸಂಸತ್‌ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದ್ದು, ಕಲಾಪ ಶುರುವಾಗುತ್ತಿದ್ದಂತೆ ಪ್ರತಿಪಕ್ಷಗಳ ಗದ್ದಲ ಶುರುವಾಯಿತು. ಈ ನಡುವೆಯೇ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಜಿ-20 ಶೃಂಗಸಭೆ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ʻ ಜಿ-20 ಶೃಂಗಸಭೆ ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಪ್ರತಿಯೊಬ್ಬ ಭಾರತೀಯರನ್ನು ನಾನು ಅಭಿನಂದಿಸುತ್ತಿದ್ದು, ಈ ಶೃಂಗಸಭೆಯನ್ನು ದೇಶದ ಜನರಿಗೆ ಅರ್ಪಿಸುವ ಪ್ರಧಾನಿ ಮೋದಿಯವರ ದೃಷ್ಟಿಯನ್ನು ನಾನು ಪ್ರಶಂಸಿಸುತ್ತೇನೆ ಎಂದರು. ಜಿ-20ಯ ಭಾರತದ ಅಧ್ಯಕ್ಷತೆ ಮುಂಬರುವ ದಶಕಗಳಲ್ಲಿ ಇದು ನಮಗೆ ಹೊಸ ದಿಕ್ಕನ್ನು ನೀಡಲಿದೆʼ ಎಂದರು.

ಪ್ರಧಾನಿ ಮೋದಿಯವರ ನೇತೃತ್ವದ ನಾಯಕತ್ವವನ್ನು ವಿಶ್ವದ ನಾಯಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ. ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿದೆ ಮತ್ತು ಮೋದಿ ನಾಯಕತ್ವದಲ್ಲಿ ಆಫ್ರಿಕನ್ ಯೂನಿಯನ್ ಜಿ-20 ನ ಖಾಯಂ ಸದಸ್ಯ ರಾಷ್ಟ್ರವಾಯಿತು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!