SPECIAL SWEET | ಕ್ಯಾರೆಟ್ ಹಲ್ವಾ ತಿಂದೆ ಇರ್ತೀರಾ, ಆದ್ರೆ ಬಾಳೆಹಣ್ಣಿನ ಹಲ್ವಾ ಟ್ರೈ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಪದಾರ್ಥಗಳು:

ಗೋಧಿ ಹಿಟ್ಟು- 3 ಬಟ್ಟಲು

ಸಕ್ಕರೆ ಅಥವಾ ಬೆಲ್ಲ- 3 ಬಟ್ಟಲು

ಬಾಳೆ ಹಣ್ಣು- 5

ತುಪ್ಪ- ಎರಡೂವರೆ ಬಟ್ಟಲು

ಹಾಲು- 1 ಬಟ್ಟಲು

ದ್ರಾಕ್ಷಿ-ಗೋಡಂಬಿ-ಸ್ವಲ್ಪ

ಉಪ್ಪು- ಚಿಟಿಕೆಯಷ್ಟು

Banana Halwa Recipe | How to Make Banana Halwa | Piyas Kitchen - YouTube

ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ:

ಮೊದಲು ಒಂದು ಬಾಣಲೆಗೆ ತುಪ್ಪವನ್ನು ಸೇರಿಸಿ ಅದು ಕಾದ ನಂತರ ಅದಕ್ಕೆ ಗೋಧಿ ಹಿಟ್ಟು ಸೇರಿಸಿ ಮತ್ತು ಹಸಿ ಪರಿಮಳ ಹೋಗುವವರೆಗೂ ಹುರಿಯಿರಿ.

ಕತ್ತರಿಸಿದ ಬಾಳೆಹಣ್ಣುಗಳನ್ನು ಸೇರಿಸಿ ಮತ್ತೆ ಫ್ರೈ ಮಾಡಿ. ನಂತರ ಎರಡು ಲೋಟ ಬಿಸಿನೀರನ್ನು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.

ಈಗ ಅದಕ್ಕೆ ಹಾಲು, ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಬೇಯಿಸಿ. ಗಟ್ಟಿಯಾದ ನಂತರ, ತುಪ್ಪ ಸವರಿದ ಬಟ್ಟಲಿನಲ್ಲಿ ಇರಿಸಿ ಮತ್ತು ಬೇಕಾದ ಆಕಾರಕ್ಕೆ ಚಾಕು ಬಳಸಿ ಕಟ್ ಮಾಡಿಕೊಳ್ಳಿ. ಕಡೆಯದಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿದರೆ ರುಚಿಯಾದ ಹಲ್ವಾ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!