ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ವಿಮಾನಯಾನ ಕಂಪನಿ ಸ್ಪೈಸ್ ಜೆಟ್ ನ ಹಲವು ವಿಮಾನಗಳು ರಾನ್ಸಮ್ವೇರ್ (ransomware) ದಾಳಿಯನ್ನು ಎದುರಿಸಿದ್ದು ಕೆಲಕಾಲ ವಿಮಾನ ಸಂಚಾರದಲ್ಲಿ ವ್ಯತ್ಯವಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಟ್ವಿಟ್ ಮಾಡಿರುವ ಸ್ಪೈಸ್ ಜೆಟ್ ಕಂಪನಿಯು ಮಂಗಳವಾರ ರಾತ್ರಿ ತನ್ನ ಸಿಸ್ಟಂ ಗಳು ರಾನ್ಸಮ್ವೇರ್ ದಾಳಿಗೆ ತುತ್ತಾಗಿದ್ದು ಕೆಲಕಾಲವಿಮಾನಯಾನ ತೊದರೆಯಾಗಿತ್ತು. ಆದರೆ ಐಟಿ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಮಸ್ಯೆಯನ್ನು ಬಗೆ ಹರಿಸಿದ್ದು ಬುಧವಾರ ಬೆಳಿಗ್ಗೆ 8.30ರ ಹೊತ್ತಿಗೆ ವಿಮಾನ ಹಾರಾಟ ವ್ಯವಸ್ಥೆ ಯಥಾಸ್ಥಿತಿಗೆ ಮರಳಿದೆ ಎಂದಿದೆ.
ಏನಿದು ರಾನ್ಸಮ್ವೇರ್ ?
ಇದೊಂದು ಕಂಪ್ಯೂಟರ್ ವೈರಸ್ ಥರದ ವ್ಯವಸ್ಥೆಯಾಗಿದ್ದು ಬೇರೆ ಸಿಸ್ಟಂಗಳನ್ನು ತನ್ನ ವಶಕ್ಕೆ ಪಡೆದು ಅವುಗಳ ಕಾರ್ಯಚರಣೆಯನ್ನು ತಡೆಯುತ್ತದೆ. ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಿದ ನಂತರ ಅದು ಮತ್ತೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದೊಂದು ಹೊಸ ಥರದ ಹೈಜಾಕಿಂಗ್ ತಂತ್ರಜ್ಞಾನ.