ಇಂಧನ ಬೆಲೆ ಏರಿಕೆ ಕಾರಣ ವಿಮಾನಯಾನ ದರದಲ್ಲಿ 15% ಏರಿಕೆ ಅಗತ್ಯವೆಂದ ಸ್ಪೈಸ್‌ ಜೆಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಮುಖ ವಿಮಾನಯಾನ ಸಂಸ್ಥೆಯಾಗಿರುವ ಸ್ಪೈಸ್‌ ಜೆಟ್‌ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ವಿಮಾನ ಕಾರ್ಯಾಚರಣೆಯ ವೆಚ್ಚವನ್ನು ಕನಿಷ್ಠ 10-15 ಶೇಕಡಾ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದೆ. ಜೆಟ್‌ ಇಂಧನದಲ್ಲಿನ ಏರಿಕೆ ಹಾಗೂ ರೂಪಾಯಿ ಅಪಮೌಲ್ಯೀಕರಣದಿಂದ ಈ ರೀತಿ ಏರಿಕೆ ಮಾಡುವುದು ಅಗತ್ಯ ಎಂದು ಉಲ್ಲೇಖಿಸಲಾಗಿದೆ.

ಈ ಕುರಿತು ಸ್ಪಷ್ಟ ಪಡಿಸಿರುವ ಸ್ಪೈಸ್‌ಜೆಟ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಮ್ಮ ಹೇಳಿಕೆಯಲ್ಲಿ “ಯುಎಸ್ ಡಾಲರ್‌ಗೆ ವಿರುದ್ಧವಾಗಿ ಭಾರತೀಯ ರೂಪಾಯಿಯ ದುರ್ಬಲತೆಯು ವಿಮಾನಯಾನ ಸಂಸ್ಥೆಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಅಲ್ಲದೇ ಇಂಧನ ಬೆಲೆಯಲ್ಲಿನ ಹೆಚ್ಚಳದಿಂದಾಗಿ ವಿಮಾನಯಾನ ಸಂಸ್ಥೆಗಳಿಗೆ ಉತ್ತಮ ಕಾರ್ಯಾಚರಣೆ ನಡೆಸಲು ದರ ಏರಿಕೆ ಅಗತ್ಯವಾಗಿದೆ” ಎಂದಿದ್ದಾರೆ.

“ಜೂನ್ 2021 ರಿಂದ ವಿಮಾನಯಾನ ಟರ್ಬೈನ್ ಇಂಧನ ಬೆಲೆಗಳು 120% ಕ್ಕಿಂತ  ಹೆಚ್ಚಾಗಿದೆ. ಇದು ವಿಮಾನಯಾನ ಸಂಸ್ಥೆಗಳಿಗೆ ಹೊರೆಯಾಗಿದೆ ಆದ್ದರಿಂದ ಎಟಿಎಫ್ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ” ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!