August 25, 2026
Tuesday, August 25, 2026
spot_img

SPICY | ತುಪ್ಪದ ಘಮ, ಸ್ಪೈಸಿ ಮಸಾಲೆ! ಭಾನುವಾರದ ಊಟಕ್ಕೆ ಮಾಡಿ ಸೂಪರ್ ಟೇಸ್ಟಿ ಪನೀರ್ ಘೀ ರೋಸ್ಟ್

ಕರಾವಳಿ ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಬಾಯಲ್ಲಿ ನೀರೂರಿಸುವ ಖಾದ್ಯಗಳಲ್ಲಿ ‘ಪನೀರ್ ಘೀ ರೋಸ್ಟ್’ ಪ್ರಮುಖವಾದದ್ದು. ಶುದ್ಧವಾದ ತುಪ್ಪದ ಘಮ ಹಾಗೂ ಹದವಾದ ಮಸಾಲೆಯುಕ್ತ ಖಾರವನ್ನು ಹೊಂದಿರುವ ಈ ರೆಸಿಪಿಯನ್ನು ಮನೆಯಲ್ಲೇ ಕೇವಲ ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು:

ಬ್ಯಾಡಗಿ ಮೆಣಸಿನಕಾಯಿ

ಗುಂಟೂರು ಮೆಣಸಿನಕಾಯಿ

ಕೊತ್ತಂಬರಿ ಬೀಜ

ಜೀರಿಗೆ

ಸೋಂಪು

ಕಾಳುಮೆಣಸು

ಮೆಂತ್ಯ ಬೀಜ

ಬೆಳ್ಳುಳ್ಳಿ

ಹುಣಿಸೇಹಣ್ಣು

ಪನೀರ್

ಗಟ್ಟಿ ಮೊಸರು

ಲಿಂಬೆ ರಸ

ಅರಿಶಿನ ಪುಡಿ

ಉಪ್ಪು

ಶುದ್ಧವಾದ ತುಪ್ಪ

ಕರಿಬೇವು

ಬೆಲ್ಲದ ಪುಡಿ

ಇದನ್ನೂ ಓದಿ:

ಮಾಡುವ ವಿಧಾನ:

ಮೊದಲು ಪನೀರ್ ತುಂಡುಗಳಿಗೆ 3 ಚಮಚ ಮೊಸರು, ಸ್ವಲ್ಪ ಉಪ್ಪು ಮತ್ತು ಅರಿಶಿನ ಹಾಕಿ 15 ನಿಮಿಷ ನೆನೆಯಲು ಬಿಡಬೇಕು. ನಂತರ ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆ, ಕಾಳುಮೆಣಸು, ಬೆಳ್ಳುಳ್ಳಿ ಮತ್ತು ಸ್ವಲ್ಪ ಹುಣಿಸೇಹಣ್ಣನ್ನು ಲಘುವಾಗಿ ಹುರಿದು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಬೇಕು.

ಬಳಿಕ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ಮ್ಯಾರಿನೇಟ್ ಮಾಡಿದ ಪನೀರ್ ತುಂಡುಗಳನ್ನು ಹಗುರವಾಗಿ ಫ್ರೈ ಮಾಡಿ ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು. ಅದೇ ಬಾಣಲಿಗೆ ಮತ್ತೆ 2 ಚಮಚ ತುಪ್ಪ ಹಾಕಿ, ರುಬ್ಬಿದ ಮಸಾಲೆಯನ್ನು ಎಣ್ಣೆ/ತುಪ್ಪ ಬಿಡುವವರೆಗೆ ಚೆನ್ನಾಗಿ ಹುರಿದು, ನಂತರ ಫ್ರೈ ಮಾಡಿದ ಪನೀರ್, ಸ್ವಲ್ಪ ಬೆಲ್ಲ ಮತ್ತು ಕರಿಬೇವು ಸೇರಿಸಿ 2 ನಿಮಿಷ ಕೈಯಾಡಿಸಿದರೆ ಬಿಸಿಬಿಸಿ ಪನೀರ್ ಘೀ ರೋಸ್ಟ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !