ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಗಾಗಿ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರನ್ನು ನಾಡಾ ಮತ್ತೆ ಅಮಾನತುಗೊಳಿಸಿದೆ.
ಮಾರ್ಚ್ 10 ರಂದು ಸೋನಿಪತ್ನಲ್ಲಿ ನಡೆದ ಟ್ರಯಲ್ಸ್ನಲ್ಲಿ ಆಯ್ಕೆಯಾದ ನಂತರ ಭಜರಂಗ್ ಪುನಿಯಾ ಮೂತ್ರದ ಮಾದರಿಯನ್ನು ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಭವಿಷ್ಯದ ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸದಂತೆ ಅಮಾನತುಗೊಳಿಸುವ ಆದೇಶವನ್ನು ನಾಡಾ ಹೊರಡಿಸಿದೆ.
ಈ ಅಮಾನತು ನಿರ್ಧಾರ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics) ಸ್ಪರ್ಧಿಸುವ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ.
ಪುನಿಯಾ ಅವರಲ್ಲಿ ಮೂತ್ರದ ಮಾದರಿ ನೀಡುವಂತೆ ಕೇಳಿದ್ದರೂ ಅವರು ನಿಗದಿತ ಸಮಯದ ಒಳಗಡೆ ನೀಡಿಲ್ಲ ಎಂದು ನಾಡಾ ತಿಳಿಸಿದೆ.
ಉದ್ದೀಪನಾ ಪರೀಕ್ಷೆ ಉದ್ದೇಶಕ್ಕಾಗಿ ಅಗತ್ಯವಾದ ಮೂತ್ರ ಮಾದರಿಗಳನ್ನು ಒದಗಿಸಲು ಸಂಬಂಧಿಸಿದ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಿದ್ದರು. ಆದರೆ ಅಧಿಕಾರಿಗಳಿ ಮನವಿಯ ನಂತರವೂ ನೀವು ಮೂತ್ರದ ಮಾದರಿಗಳನ್ನು ನೀಡಲು ನೀರಕಾರಿಸಿದ್ದೀರಿ. ಮೂತ್ರ ಮಾದರಿ ಸಂಗ್ರಹಿಸಲು ಅವಧಿ ಮೀರಿದ ಕಿಟ್ಗಳನ್ನು ನೀಡಲಾಗಿದೆ ಎಂಬ ನಿಮ್ಮ ಆರೋಪಕ್ಕೆ ಈಗಾಗಲೇ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಈ ಕಾರಣಕ್ಕೆ ಅಮಾನತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಾಡಾ ತನ್ನ ನೊಟೀಸ್ ಹೇಳಿದೆ.