ಶ್ರೀಲಂಕಾದಲ್ಲಿ ಬೇಹುಗಾರಿಕೆ ಹಡಗು, ಪಾಕ್‌ನತ್ತ ಸೇನೆ: ಏನಿದು ಡ್ರ್ಯಾಗನ್ ನಿಗೂಢ ಹೆಜ್ಜೆ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ತನ್ನ ಬೇಹುಗಾರಿಕೆ ಹಡಗನ್ನು ಲಂಗರು ಹಾಕಿರುವ ಚೀನಾ ಇದೀಗ ತನ್ನ ಸೇನೆಯನ್ನು ಪಾಕಿಸ್ಥಾನಕ್ಕೆ ರವಾನಿಸಲು ಸಜ್ಜಾಗಿದೆ. ಈ ಮೂಲಕ ಭಾರತದ ಮೇಲೆ ಬೇಹುಗಾರಿಕೆ ನಡೆಸಲು ಮುಂದಾಗಿದೆ. ಉಪಗ್ರಹಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿರುವ ಚೀನಾದ ಹಡಗು ಮಂಗಳವಾರ ಬೆಳಗ್ಗೆ ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಲಂಗರು ಹಾಕಿತ್ತು.

ಪಾಕಿಸ್ಥಾನದಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಚೀನಾ ದೇಶ, ಇದೀಗ ಪಾಕಿಸ್ತಾನದಲ್ಲಿ ಸೇನಾ ನೆಲೆ ಸ್ಥಾಪನೆಗೆ ಮುಂದಾಗಿದೆ. ಅದರಲ್ಲೂ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಚೀನಾ ತನ್ನ ಸೇನಾ ನೆಲೆ ಸ್ಥಾಪಿಸಲು ನಿರ್ಧರಿಸಿದೆ.

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಗಡಿಯಲ್ಲಿ ಚೀನಾ ದೇಶ ಕೈಗಾರಿಕೆ ಹಾಗೂ ರಸ್ತೆ ಅಭಿವೃದ್ಧಿ ಮಾಡುತ್ತಿದೆ. ಎರಡೂ ದೇಶಗಳಲ್ಲಿ ಚೀನಾ ದೇಶ ಬಂಡವಾಳ ಹೂಡಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ತನ್ನ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಎರಡೂ ರಾಷ್ಟ್ರಗಳ ಸಹಮತದೊಂದಿಗೆ ಚೀನಾ ತನ್ನ ಸೇನಾ ನೆಲೆ ಸ್ಥಾಪನೆಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!